ಜಿದ್ದಾ ಜಿದ್ದಿಗೆ ಬಿದ್ದ ಗುರು ಶಿಷ್ಯರು ಬಾಗಲಕೋಟೆ.
ಬಾಗಲಕೋಟೆ ಏಪ್ರಿಲ್.12

ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದಲ್ಲಿ ಬಿ.ಜೆ.ಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷರಾದ ಮುರುಗೇಶ ನಿರಾಣಿ ಅವರು ಬೆಳಗಾವಿ ಲೋಕ ಸಮರದ ವಿಚಾರವಾಗಿ ಕೂಡಲ ಸಂಗಮದ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಜೋರು ಭರಾಟೆಯ ನೇರ ಮಾತುಗಳಿಂದ ಬಾಣ ಬಿಟ್ಟಿದ್ದಲ್ಲದೆ ಏಕ ಪಕ್ಷಿಯ ಸ್ವಾಮೀಜಿಗಳ ನಿರ್ಧಾರಕ್ಕೆ ಸವಾಲು ಹಾಕಿದ್ದಾರೆ, ಒಂದು ಸಮಾಜದ ಸ್ವಾಮೀಜಿಗಳಾಗಿ ಇನ್ನೊಂದು ಸಮಾಜದ ಇಬ್ಬರು ಅಭ್ಯರ್ಥಿಗಳು ಇರುವಾಗ ಒಬ್ಬರ ಪರವಾಗಿ ಚುನಾವನಾ ಪ್ರಚಾರದಲ್ಲಿ ತೊಡಗಿರುವದು ಸ್ವಾಮೀಜಿಗೆ ಶೋಭೆ ತರುವುದಲ್ಲ ಸಮುದಾಯದ ಸ್ವಾಮಿಜಿಗಳಾಗಿ ಅಭ್ಯರ್ಥಿಗಳನ್ನು ಒಂದೆ ತಕ್ಕಡಿಯಲ್ಲಿ ತೂಗಿ ಆಶೀರ್ವಾದ ಮಾಡಬೇಕು, ಒಬ್ಬರ ಪರವಾಗಿ ಪ್ರಚಾರ ಮಾಡುವುದೇನಿದೆ ನೀವು ಒಂದು ಪಕ್ಷದ ಎಜೇಂಟರೆ? ಸ್ವಾಮೀಜಿಗಳಿಗೆ ಒಂದು ಮಾತನ್ನು ಕೇಳುತ್ತೇನೆ ನೀವು ನನ್ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದರೆ ನಿಮ್ಮ ಹಲವಾರು ನೂರು ವಿಷಯಗಳು ನನ್ನ ಹತ್ತಿರ ಇವೆ ನಮ್ಮ ಸಮಾಜದ ಸ್ವಾಮೀಜಿಗಳು ಏನು ಮಾತನಾಡಬಾರದು.

ಎಂದು ಗೌರವ ಕೊಟ್ಟು ಸುಮ್ಮನಿದ್ದೇನೆ ಮಾಡನಾಡಲು ಸಾಕಷ್ಟು ಪಾಯಿಂಟ್ಗಳಿವೆ ಅದನ್ನು ನಮ್ಮ ದೌರ್ಬಲ್ಯ ಎಂದು ಭಾವಿಸಬೇಡಿ ಗೌರವಯುತ ಸ್ವಾಮಿಗಳಾಗಿ ಧರ್ಮದ ಅಡಿಯಲ್ಲಿ ಕೆಲಸ ಮಾಡಿ, ಪಂಚಾಸಾಲಿ ಸಮಾಜಕ್ಕೆ 2 ಅ ಮೀಸಲಾತಿ ವಿಚಾರವಾಗಿ ಇದೆ ಶ್ರೀಗಳು ಬಿ.ಜೆ.ಪಿ ಸರ್ಕಾರ ಇದ್ದಾಗ ಎಷ್ಟು ಹೋರಾಟ ಮಾಡುತ್ತಿದ್ದರು ಮೂರು ತಿಂಗಳ ಕಾಲಾವಕಾಶ ಕೇಳಿದರೆ ವಿಧಾನಸೌಧ ಮುತ್ತಿಗೆ ಹಾಕಿದರು ಈಗ ನಿಮ್ಮ ಪ್ರಚಾರದ ಪಕ್ಷವೆ ಆಡಳಿತದಲ್ಲಿದೆ ಲಕ್ಷ್ಮಿ ಹೆಬ್ಬಾಳ್ಕರ್ ಮಿನಿಸ್ಟರಿದ್ದಾರೆ ಮಾಡಸ್ರಿ ಮೀಸಲಾತಿನ, ಮಾತಿನ ಭರಾಟೆಯಲ್ಲಿ ಅಕ್ಕ ಮೂರು ತಿಂಗಳೊಳಗೆ ಮೀಸಲಾತಿ ತರತೀನಿ ನನಗೆ ಎರಡು ಚಿನ್ನದ ಬಳೆ ಬೆಳಗಾವಿ ಕುಂದಾ ಜೊತೆಗೆ ಸಮಾಜ ಭಾಂದವರ ಮುಂದೆ ಸನ್ಮಾನ ಮಾಡಬೇಕು 😘😘 ಅಂದರು ಅದಕ್ಕೆ ನಾನು ಹೇಳಿದ್ದೆ ಅಕ್ಕ ಎರಡು ಚಿನ್ನದ ಬಳೆ ಅಲ್ಲ ಒಂದು ಕೆ.ಜಿ ಚಿನ್ನ ಹತ್ತು ಸಾವಿರ ಸಮಾಜ ಬಾಂಧವರಿಂದ ಸನ್ಮಾನ ಮಾಡುತ್ತೇನೆಂದು ಈಗ ಅವರದೇ ಸರ್ಕಾರ ಬಂದು ಒಂದ ವರ್ಷ್ ಪೂರೈಸುತ್ತಿದ್ದರು ಮೀಸಲಾತಿ ವಿಷಯವೇ ಅಕ್ಕಗ ನೆನಪಾಗ್ತಿಲ್ಲ ಎಂದು ಕುಟುಕಿದರು. 😍
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.