ಮಾನ್ವಿಯಲ್ಲಿ ನಾನಾ ಸಮಸ್ಯೆ ಜನರ ಕೂಗು ಶುದ್ಧ ಕುಡಿಯುವ ನೀರಿನ – ಪರಿಶೀಲನೆ ಮಾಡುವಂತೆ ಆಗ್ರಹ.
ಮಾನ್ವಿ ಫೆ.20

ಮಾನ್ವಿ ಪಟ್ಟಣದಲ್ಲಿ ಅನಧಿಕೃತವಾಗಿ ಶುದ್ಧ ಕುಡಿಯುವ ಘಟಕಗಳು ತಲೆ ಎತ್ತಿದ್ದು, ಪುರಸಭೆ ಅಧಿಕಾರಿಗಳು ಇದನ್ನು ಕಡಿವಾಣ ಹಾಕಬೇಕು ಎಂದು ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಂಘಟನಾಕಾರರ ಕೂಗು ಕೇಳಿ ಬಂತು.
ಪುರಸಭೆ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ಹಾಗು ಚರಂಡಿಗಳು ತುಂಬಿದ್ದು, ಇದನ್ನು ತೆರವು ಗೊಳಿಸಬೇಕು, ಕೆಲ ವಾರ್ಡಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ ಎಂದು ಪತ್ರಕರ್ತ ಮೈನುದ್ದೀನ್ ಕಿಡಿಕಾರಿದರು.
ಮಾನ್ವಿಯಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದು, ಪುರಸಭೆ ಅಧಿಕಾರಿಗಳು ಇದನ್ನು ಕ್ರಮ ಜರುಗಿಸುವ ಕೆಲಸ ಮಾಡಬೇಕು ಎಂದು ಸಂಘಟನಾಕಾರರು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ