ಜೆ.ಡಿ.ಎಸ್ ಪಕ್ಷದ ತಾಲೂಕ ಜನತಾದಳ (ಜಾತ್ಯಾತೀತ) ವಿವಿಧ ಘಟಕಗಳ – ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ & ನೇಮಕ ಮಾಡಿ ಆದೇಶಿಸಿದೆ.
ಮಾನ್ವಿ ಆ.28





ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ತಾಲೂಕ ಜನತಾದಳ (ಜಾತ್ಯತೀತ) ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಪಕ್ಷ ಸಂಘಟನೆಯ ಬಲ ವರ್ಧನೆ ಹಾಗೂ ತಾಲೂಕ ಮತ್ತು ನಗರ ಮಟ್ಟದಲ್ಲಿ ಚಟುವಟಿಕೆಗಳನ್ನು ವೇಗ ಗೊಳಿಸುವ ಉದ್ದೇಶದಿಂದ ಪ್ರಮುಖ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ.
ತಾಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಎಂ.ಡಿ ಭಾಷಾ ಸಾಬ್, ತಾಲೂಕು ರೈತ ಘಟಕದ ಅಧ್ಯಕ್ಷರನ್ನಾಗಿ ಶರಣಪ್ವಪ ಗೌಡ ಮದ್ಲಾಪೂರ, ನಗರ ಘಟಕದ ಅಧ್ಯಕ್ಷರನ್ನಾಗಿ ಹೆಚ್.ಮೌನೇಶ್ ಗೌಡ ಹಾಗೂ ನಗರ ಯುವ ಘಟಕದ ಅಧ್ಯಕ್ಷರನ್ನಾಗಿ ಎಂ.ಡಿ ಉಸ್ಮಾನ್ ನೇಮಕ ಗೊಂಡಿದ್ದಾರೆ.

ಈ ನೇಮಕಾತಿಗಳು ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ರವರ ಶಿಫಾರಸ್ಸಿನ ಮೇರೆಗೆ ಕೂಡಲೇ ಜಾರಿ ಗೊಂಡಿದ್ದು, ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ದರಾಗಿ, ಮಾನ್ವಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ ಪೋತ್ನಾಳ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಕ್ಷದ ನೂತನ ಅಧ್ಯಕ್ಷರಿಗೆ ತಾಲೂಕ ಜೆಡಿಎಸ್ ಹಿತೈಷಿಗಳು, ಕಾರ್ಯಕರ್ತರು, ನಾಯಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ