ಸಾಧಕರನ್ನು ಕಡೆಗಣಿಸಿದ ಕನ್ನಡ ಸಾಹಿತ್ಯ – ಸಮ್ಮೇಳನ ಪರಿಷತ್ತ.
ದೇವರ ಹಿಪ್ಪರಗಿ ಜ.03

ವಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ದಿನಾಂಕ 03/01/2025 ರಂದು ಕನ್ನಡ ಸಾಹಿತ್ಯ ಹಮ್ಮಿಕೊಂಡಿದ್ದು ಇದೊಂದು ಬುಷಾ ಸಾಹಿತ್ಯ ಪರಿಷತ್ ಆಗಿದೆ.ಕನ್ನಡ ಭಾಷೆಯ ಮತ್ತು ಕರ್ನಾಟಕ ಸಾಹಿತ್ಯನೆ ಗೊತ್ತಿಲದ ಜನರನ್ನು ಸಾಧಕರಾಗಿ ಸನ್ಮಾನಿಸಿದ ಆಯೋಜಕರಿಗೆ ಸಮಸ್ತ ತಾಲೂಕಿನ ಬುದ್ದಿ ಜೀವಿಗಳು, ಚಿಂತಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಡೊಳ್ಳಿನ ಪದ, ಯೋಗಾ, ಪ್ರಗತಿಪರ ರೈತರು ಹಾಗೂ ಜಾನಪದ ಕಲಾವಿದರು ಸಾಕಷ್ಟು ಜನ ಪ್ರತಿಭಾವಂತರು ಇದ್ದರೂ ಕೂಡಾ ಇವರನ್ನು ಲೆಕ್ಕಿಸದೆ ಯಾವ ಮಾನದಂಡದ ಮೇಲೆ ಸಾಧಕರನ್ನು ಆಯ್ಕೆ ಮಾಡಿ ಕೊಡಿದ್ದಾರೆ. ಅನ್ನೋದನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ಪಷ್ಟಿಕರಣ ನೀಡಬೇಕು. ಪ್ರತಿಯೊಂದು ತಾಲೂಕ ಮಟ್ಟದ ಕಾರ್ಯಕ್ರಮದಲ್ಲಿ ಕೆಲ ಮೇಲ್ಜಾತಿಯ ಪತ್ರಿಕಾ ಮಾಧ್ಯಮದವರಿಗೆ ಮಾತ್ರ ಪ್ರವೇಶ ಇನ್ನೂ ದಲಿತ ಹಿಂದುಳಿದ ವರ್ಗದ ಪತ್ರಿಕಾ ಮಾಧ್ಯಮದವರಿಗೆ ಪ್ರವೇಶ ಇಲ್ಲದಂತಾಗಿದೆ ಇದಕ್ಕೆಲ್ಲಾ ನೇರ ಹೊಣೆ ತಾಲೂಕು ಆಡಳಿತನೇ ಕಾರಣ ಎನ್ನುವಂತಾಗಿದೆ. ಇದೇ ರೀತಿ ಮುಂದುವರೆದರೆ ತಾಲೂಕು ಆಡಳಿತದ ವಿರುದ್ಧ ಸುದ್ಧಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮುಂಬರವ ದಿನಗಳಲ್ಲಿ ಕನ್ನಡ ಭಾಷೆ, ಸಂಸ್ಕ್ರುತಿ, ಸಾಹಿತ್ಯ ನಾಶವಾಗಿ ಹೋಗುತ್ತದೆ. ಎಂದು ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ, ದಸ್ತಗೀರ ಮುಲ್ಲಾ ತೀವ್ರವಾಗಿ ಖಂಡಿಸುತ್ತಾರೆ. ಇದೇ ಸಂದರ್ಭದಲ್ಲಿ, ಎಸ್.ಎಸ್ ಕೊಣ್ಣೂರ, ಡಾ, ಬಿ.ಎಂ ಪಾಟೀಲ್, ಬಿ.ಬಿ ಚೌಧರಿ, ಪ್ರವೀಣ ಹುಗ್ಗಿ, ಈರಣ್ಣ ಅಂಗಡಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ