ಪುಸ್ತಕ ಲೋಕಾರ್ಪಣೆ – ಕಾರ್ಯಕ್ರಮ.
ಚಳ್ಳಕೆರೆ ಜ.05

ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಮತ್ತು ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ ಇಂದು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಡಾ.ಯೋಗಾನಂದ ಎಸ್.ಕೆ ಅವರ ಚೊಚ್ಚಲ ಕೃತಿ ‘ಮೊಳಕಾಲ್ಮೂರು ತಾಲ್ಲೂಕ್ ಸಮಗ್ರ ಇತಿಹಾಸ ಮತ್ತು ಪುರಾತತ್ವ ಅವಶೇಷಗಳು’ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸ. ಪ್ರ. ದ. ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಧ್ಘಾಟನೆಯನ್ನು ಡಾ, ಜಿ.ವಿ ಪರಮಶಿವಮೂರ್ತಿ ಮಾನ್ಯ ಕುಲಪತಿಗಳು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ತಮ್ಮ ಉಧ್ಘಾಟಿಸಿ ಮಾತನಾಡಿ ‘ ಡಾ. ಯೋಗಾನಂದ ಎಸ್.ಕೆ ಅವರ ಅಪಾರ ಪರಿಶ್ರಮ ಮತ್ತು ಆರು ವರ್ಷಗಳ ಕಾಲ ನಿರಂತರ ಸಂಶೋಧನೆ ಅಂಗವಾಗಿ ಇಂದು ಕೃತಿ ಪುಸ್ತಕ ರೂಪ ಪಡೆದು ಕೊಂಡಿದೆ ಪ್ರತಿಯೊಬ್ಬರು ಮೊಳಕಾಲ್ಮೂರು ಸಮಗ್ರ ಇತಿಹಾಸ ಕುರಿತು ಓದಲೇ ಬೇಕಾದಂತಹ ಇತಿಹಾಸ ಪುಸ್ತಕ ಮುದ್ರಣ ಕೂಡಾ ಅಚ್ಚುಕಟ್ಟಾಗಿ ಗುಣಮಟ್ಟದ ರೀತಿಯಲ್ಲಿ ಮಾಡಲಾಗಿದೆ ಪುಸ್ತಕ ಮುದ್ರಣ ಮಾಡಿಸಿದ ಪ್ರಕಾಶಕರು ಆದ ಎಸ್. ರಾಜು ಸೂಲೇನಹಳ್ಳಿ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.

ಆನಂತರ ವಿಧ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿ ಕೊಳ್ಳಲು ಬೇಕಾಗುವ ಮಾರ್ಗ ಯಾವುದು ಇವಾಗಿನಿಂದಲೇ ಸಮಯ ವ್ಯರ್ಥ ಮಾಡದೇ ಓದಿನಲ್ಲಿ ತೊಡಗಿಸಿ ಕೊಳ್ಳಲು ಸಲಹೆ ನೀಡಿದರು. ಆನಂತರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಡಾ, ವಿರೂಪಾಕ್ಷಿ ಪೂಜಾರಿಹಳ್ಳಿ ಪ್ರಾಧ್ಯಾಪಕರು ಚರಿತ್ರೆ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರು ಪುಸ್ತಕ ಬಿಡುಗಡೆ ಮಾಡಿ ಆನಂತರ ಪುಸ್ತಕ ಕುರಿತು ತಮ್ಮ ನುಡಿಗಳಲ್ಲಿ ಮೊಳಕಾಲ್ಮೂರು ತಾಲ್ಲೂಕು ಸಮಗ್ರ ಇತಿಹಾಸ ಮತ್ತು ಪುರಾತತ್ವ ಅವಶೇಷಗಳು ಈ ಕೃತಿಯಲ್ಲಿ ಇಡಿ ಮೊಳಕಾಲ್ಮೂರು ಎಲ್ಲಾ ಹಳ್ಳಿಗಳಿಗೆ ಹೋಗಿ ಸವಿಸ್ತರವಾಗಿ ಸಂಶೋಧನೆ ನಡೆಸಿ ಆನಂತರ ಪರಾಮರ್ಶೆ ಗ್ರಂಥ ಶೋಧಿಸಿ ಸಂಗ್ರಹಿಸಿ ಇದರಲ್ಲಿ ಅಂಶಗಳನ್ನು ಕಲೆ ಹಾಕಿದ್ದಾರೆ. ಪುರಾತತ್ವ ಅವಶೇಷಗಳು ಬಗ್ಗೆ ಸಮಗ್ರ ಅಧ್ಯಯನ ಮಾಡಿ ಪುಸ್ತಕ ರಚನೆ ಮಾಡಲಾಗಿದೆ ಯಾವುದೇ ಹುರುಳಿಲ್ಲ ತುಂಬಾ ಅವಶ್ಯಕ ಮಾಹಿತಿ ಇದೆ ಹಾಗೆಯೇ ಅಶೋಕ ಶಿಲಾ ಶಾಸನ ಪತ್ತೆ ಹಚ್ಚಿದ ರೀತಿ ಸುತ್ತಮುತ್ತಲಿನ ಗ್ರಾಮಗಳ ಅವಶೇಷಗಳು ಎಲ್ಲಿವೆ ಎಂಬುದನ್ನು ಈ ಕೃತಿ ಒಳ ಗೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ತಮ್ಮ ಅತಿಥಿಗಳ ನುಡಿಯಲ್ಲಿ ‘ಪ್ರಕಾಶನ ನಡೆದು ಬಂದ ದಾರಿ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಮತ್ತೊರ್ವ ಮುಖ್ಯ ಅತಿಥಿಗಳು ಆದ ಶ್ರೀಯುತ ಗೋವಿಂದಪ್ಪ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೊಳಕಾಲ್ಮೂರು, ಡಿ. ಸೂರಯ್ಯ ಪ್ರಾಚಾರ್ಯರು ಸ.ಪ್ರ.ದ ಕಾಲೇಜು ಮೊಳಕಾಲ್ಮೂರು, ಜಿಂಕಾ ಶ್ರೀನಿವಾಸ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಮೂರು. ಡಾ, ಸುರೇಶ್ ನಾಗಲಮಡಿಕೆ ಪ್ರಾಧ್ಯಾಪಕರು ವಿವೇಕಾನಂದ ಪದವಿ ಕಾಲೇಜು ಬೆಂಗಳೂರು ಭಾಗವಹಿಸಿದ್ದರು,ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ : ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ