ಸಂವಿಧಾನದ ಮೂಲ ಸಂರಚನೆಯನ್ನು ಬದಾಲಾಯಿಸಲು ಅಧಿಕಾರವಿಲ್ಲ – ಎಐಎಲ್ ಯು. ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ 50ನೇ ವರ್ಷಾಚರಣೆ.
ಹೊಸಪೇಟೆ ( ಏ. 26 ) :

ದಿನಾಂಕ 26.4.2023 ಬುಧವಾರ
ಸಂಜೆ ರಂದು ಅಖಿಲ ಭಾರತ ವಕೀಲರ ಸಂಘ(AILU) ಹೊಸಪೇಟೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂವಿಧಾನದ ಮೂಲ ಸಂರಚನೆಗಳಾದ ಪ್ರಜಾಪ್ರಭುತ್ವ, ಗಣರಾಜ್ಯ, ಸಾರ್ವಭೌಮತ್ವ, ನ್ಯಾಯಾಂಗದ ಸ್ವಾತಂತ್ರ್ಯ, ಜಾತ್ಯತೀತತೆ ನ್ಯಾಯಾಂಗದ ಸ್ವಾತಂತ್ರ್ಯ,ಇವುಗಳನ್ನು ಬದಲಾಯಿಸಲು ಸಂಸತ್ತಿಗೆ ಅಧಿಕಾರವಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ 50ನೇ ವರ್ಷಾಚರಣೆ ಕಾರ್ಯಕ್ರಮವನ್ನು ನಗರದ ಪುನೀತ್ ಸರ್ಕಲ್ ನಲ್ಲಿ ಆಚಾರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲರಾದ ಎ ಕರುಣಾನಿಧಿ ಮಾತನಾಡಿ 50 ವರ್ಷಗಳ ಹಿಂದೆಯೇ ಇವುಗಳನ್ನು ಬದಲಾಯಿಸಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹ ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳುತ್ತಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಹೇಳಿದರು. ಕೇಂದ್ರದ ಕಾನೂನು ಮಂತ್ರಿ ಕಿರಣ ರಿಜಿಜು ಕೋಲೀಜಿಯಂ ಕುರಿತು ಮಾತನಾಡುವಾಗ ಸಂಸತ್ತಿನಿಂದ ಆಯ್ಕೆಯಾದ ಸರ್ಕಾರದ ಶಿಫಾರಸುಗಳನ್ನು ಪರಿಗಣಿಸಬೇಕೆಂದು ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದರು. ಮತ್ತು ನ್ಯಾಯಾಂಗದಲ್ಲಿ ನೇಮಕಾತಿ, ವರ್ಗಾವಣೆ, ಆಡಳಿತ ಮೊದಲಾದವುಗಳನ್ನು ನಿರ್ವಹಿಸಲು ರಾಷ್ಟ್ರೀಯ ಸ್ವತಂತ್ರ ನ್ಯಾಯಾಂಗ ಆಯೋಗವನ್ನು ರಚನೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ಮುನೀರ್ ಬಾಷಾ, ಬಿ. ಮಹೇಶ್, ವೆಂಕಟೇಶಲು, ಮಹಿಳಾ ವಕೀಲರಾದ ಹಾಜಿ ರಫೀಯಾ ಜಬೀನ್, ಕಲ್ಯಾಣಯ್ಯ ಹಾಗೂ ಮುಖಂಡರಾದ ಎಂ. ಜಂಬಯ್ಯನಾಯಕ, ತಾಯಪ್ಪ ನಾಯಕ, ಭಾಸ್ಕರ್ ರೆಡ್ಡಿ, ಮೊದಲಾದವರು ಭಾಗವಹಿಸಿದ್ದರು.
ತಾಲೂಕ ವರದಿಗಾರರು : ಮಾಲತೇಶ್.ಶೆಟ್ಟರ್. ಹೊಸಪೇಟೆ.