ನವ ವಧು ವರರಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರವನ್ನು ಬೆಳೆಸೋಣ – ಡಾ, ರೂಪ ಶ್ರೀ ಬಿ.ವೈ ಅಭಿಮತ.

ಚಿತ್ರದುರ್ಗ ಜ.06

ಬಸವ ಕೇಂದ್ರ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠ ಚಿತ್ರದುರ್ಗದಲ್ಲಿ ನಡೆದ ಮೂವತ್ತೈದನೆಯ ವರ್ಷದ ಮೊದಲನೇಯ ತಿಂಗಳ ಸಾಮೂಹಿಕ ವಿವಾಹ ಕಲ್ಯಾಣೋತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಚಿತ್ರದುರ್ಗ ಜಿಲ್ಲೆಯ ಖ್ಯಾತ ಹೆರಿಗೆ ಮತ್ತು ಪ್ರಸೂತಿ ತಜ್ಞರು ಆದ ಶ್ರೀಮತಿ ಡಾ.ರೂಪಶ್ರೀ ಬಿ.ವೈ ಮಾತನಾಡಿ ಇಂದಿನ ದಿನಗಳಲ್ಲಿ ಸಾಮೂಹಿಕ ವಿವಾಹದಲ್ಲಿ ಭಾಗಿ ಯಾಗುವವರ ಸಂಖ್ಯೆ ಕಡಿಮೆ ಆಗಿದೆ.

ಕಾರಣ ಜಿಲ್ಲೆಯಲ್ಲಿ ಅತೀ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿವೆ ಅಲ್ಲದೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳಿಗೆ ಒಳಪಟ್ಟು ತಂದೆ ತಾಯಿಗಳಿಗೆ ಮಾಹಿತಿ ಇಲ್ಲದೆ ಅತೀ ಚಿಕ್ಕ ವಯಸ್ಸಿನಲ್ಲಿ ಪ್ರೇಮ ವಿವಾಹವಾಗಿ ಕುಟುಂಬದವರ ಆಸರೆ ಇಲ್ಲದೆ ಅದೆಷ್ಟೋ ಜೀವಗಳು ತಮ್ಮ ಜೀವನವನ್ನು ರೂಪಿಸಿ ಕೊಳ್ಳುವ ಹದಿ ಹರೆಯದ ವಯಸ್ಸಿನಲ್ಲಿ ಎಡವಿ ಮುಂದೆ ಜೀವನದಲ್ಲಿ ಬಾಳಿ ಬದುಕಿ ತಂದೆ ತಾಯಿಗಳನ್ನು ಸಾಕಿ ಸಲುಹುವ ಮುನ್ನವೇ ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ ಬಸವ ಕುಮಾರ ಸ್ವಾಮಿಗಳು ವಹಿಸಿ ಮಾತನಾಡಿ ಈ ರೀತಿಯ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾದರೆ ಕುಟುಂಬಕ್ಕೆ ಹೊರೆಯಾಗದೆ ಸಾಲಮುಕ್ತ ನೆಮ್ಮದಿ ಜೀವನ ಸಾಗಿಸಬಹುದು ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದಭರ್ದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಶ್ರೀ ಕೆ.ಎಂ ವಿರೇಶ್, ಡಾ, ಶ್ರೀ ಬಸವ ಪ್ರಭುಸ್ವಾಮಿಜಿ, ಹೆರಿಗೆ ಮತ್ತು ಪ್ರಸೂತಿ ತಜ್ಞರು ಆದ ಡಾ, ರೂಪಶ್ರೀ.ಬಿ.ವೈ ಕೌನ್ಸಿಲರ್ ಮಂಜುನಾಥ್, ಕಣಿವೆ ಮಾರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಕೆಂ.ಎಂ ತಿಪ್ಪೇಸ್ವಾಮಿ, ಡಾ, ಮೇಘನಾ ಮೂರ್ತಿ ಬಿ.ಓ, ರುದ್ರಮುನಿ, ಇತರೆ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ : ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button