ಶ್ರೀರಾಮ್ ಫೈನಾನ್ಸ್ ಲಿ.ನಿಂದ 1550 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ – ಪ್ರೋತ್ಸಾಹ ಧನ ಪ್ರಧಾನ.
ಹೊಸಪೇಟೆ ಜ.06

ಜೀವನನ್ನು ಕೆಟ್ಟತನದಿಂದ ಕಟ್ಟಿಕೊಂಡರೆ ಅದು ಸಾರ್ಥಕ ವಾಗುವುದಿಲ್ಲ. ನಮ್ಮ ನಡೆ, ನುಡಿ, ಕಾರಿತ್ರೆ ಸರಿಯಾಗಿದ್ದು ಸಮಾಜದಲ್ಲಿ ಒಳ್ಳೆ ತನದಿಂದ ಬದುಕಬೇಕು ಆಗ ಮಾತ್ರ ನಮ್ಮ ಜೀವನ ಸಾರ್ಥಕ ವಾಗುವುದು ಎಂದು ಶ್ರೀ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕೊಟ್ಟೂರು ಸಂಸ್ಥಾನಮಠ ಹೊಸಪೇಟೆ ವಿದ್ಯಾರ್ಥಿಗಳಿಗೆ ಪ್ರವಚನ ನೀಡಿದರು.ನಗರದ ಸಾಯಿಬಾಬಾ ಸರ್ಕಲ್ ಬಳಿ ಇರುವ ಸಾಯಿಲೀಲಾ ರಂಗಮಂದಿರ ಕಲ್ಯಾಣ ಮಂಟಪದಲ್ಲಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಹೊಸಪೇಟೆ ಇವರ ಪ್ರಾಯೋಜಕತ್ವದಲ್ಲಿ, ಶ್ರೀರಾಮ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಶ್ರೀರಾಮ್ ಫೈನಾನ್ಸ್ ನವರು ವಿದ್ಯಾರ್ಥಿ ಪ್ರೋತ್ಸಾಹ ಧನ ಕೊಡುತ್ತಿರುವುದು ಹೆಮ್ಮೆಯ ವಿಷಯ ವಿದ್ಯಾರ್ಥಿಗಳು ಈ ಹಣವನ್ನುಬೇರೆ ಯಾವುದಕ್ಕೆ ಖರ್ಚು ಮಾಡದೆ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿ ಕೊಳ್ಳಬೇಕು. ಒಳ್ಳೆಯ ಶಿಕ್ಷಣದಿಂದ ಈ ದೇಶ ಅಭಿವೃದ್ಧಿಯಾಗಲು ಸಾಧ್ಯ. ಶಿಕ್ಷಣವು ಒಳ್ಳೆಯದಕ್ಕೆ ಬಳಕೆಯಾಗ ಬೇಕೇ ಹೊರತು ದೇಶದ ನಾಶಕ್ಕೆ ಬಳಸಬಾರದು. ವಿದ್ಯಾರ್ಥಿಗಳು ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಅತ್ಯುತ್ತಮ ನಾಗರಿಕರಾಗ ಬೇಕು, ಮನೆಯಲ್ಲಿ ನಿಮ್ಮ ತಂದೆ ತಾಯಿಯವರು ನಿಮ್ಮ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೋಸ್ಕರ ಅವರು ಪಡುತ್ತಿರುವ ಕಷ್ಟವನ್ನು ಅರಿತು ಅವರನ್ನು ಗೌರವಿಸುತ್ತಾ ಅವರಲ್ಲಿರುವ ಗುಣಗಳನ್ನು ಆದರ್ಶವನ್ನಾಗಿಟ್ಟು ಕೊಂಡು ಮುಂದು ವರಿಯಬೇಕು. ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ಭ್ರಷ್ಟಾಚಾರಿ ಗಳಾಗಿದ್ದಾರೆ ಎಂದು ವ್ಯಥೆ ಪಡುವುದಕ್ಕಿಂತ ಶಿಕ್ಷಣ ಪಡೆದು ಉನ್ನತ ಸ್ಥಾನಗಳಿಗೆ ನೀವು ಹೋಗಿ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾದರಿಯ ಕಿವಿ ಮಾತುಗಳನ್ನು ಹೇಳಿದರು. ಶ್ರೀರಾಮ್ ಫೈನಾನ್ಸ್ ನವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಇಂದಿನ ಕೆಲವು ಕಂಪನಿಗಳು ಉದ್ಯಮ ಮಾಡಿಕೊಂಡು ಲಾಭಾಂಶವನ್ನು ತಮ್ಮಲ್ಲಿಯೇ ಇಟ್ಟು ಕೊಳ್ಳುವಂತಹ ಪರಿಸ್ಥಿತಿಯಲ್ಲಿ ಶ್ರೀರಾಮ್ ಕಂಪನಿಯ ಕಾರ್ಯ ಶ್ಲಾಘನಿಯ ಎಂದರು.ಅಬ್ದುಲ್ ರಹಿಮಾನ್ ಎ. ನಂದಗಾದಿ 3 ನೇ. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೊಸಪೇಟೆ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶ್ರೀರಾಮ್ ಫನಾನ್ಸ್ ನವರು ವಿದ್ಯಾರ್ಥಿಗಳ ಪ್ರೋತ್ಸಾಹ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿ ಮಾತನಾಡಲು ಅವಕಾಶ ಕೊಟ್ಟಿರುವುದು ಹೆಮ್ಮೆಯ ವಿಷಯ, ಶ್ರೀರಾಮ್ ಫೈನಾನ್ಸ್ ಕಂಪನಿಯು ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಅವಶ್ಯಕತೆ ಇರುವವರಿಗೆ ವಿವಿಧ ರೂಪದ ಸಾಲ ಸೌಲಭ್ಯ ಕೊಡುತ್ತಿರುವುದು. 2013 ರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡುತ್ತಿರುವುದು, 50 ವರ್ಷಗಳಿಂದ ಕಂಪನಿಯು ಯಶಸ್ವಿಯಾಗಿ ಸಾಗುತ್ತಿರುವುದು ಶ್ಲಾಘನೀಯ.

ಶಿಕ್ಷಣ ನಿಮ್ಮ ಹಕ್ಕು, ಇಲ್ಲಿ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ, ವಿದ್ಯಾವಂತರು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ ಫನಾನ್ಸ್ ನವರು ವಿದ್ಯಾರ್ಥಿಗಳನ್ನು ಈ ದೇಶದ, ಸಮಾಜದ ಪಿಲ್ಲರ್ ಗಳಂತೆ ಹೊರಹೋಮ್ಮಿ ಒಳ್ಳೆಯ ವ್ಯಕ್ತಿಗಳಾಗುತ್ತಾರೆ ಎಂದು ನಂಬಿದ್ದೇನೆ ಎನ್ನುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕ ಮಾತುಗಳನ್ನಾಡಿದರು. ನನ್ನ ವೈಯಕ್ತಿಕವಾಗಿ ಹೇಳುವುದಾದರೆ ಸ್ವಾಮೀಜಿಯವರ ವ್ಯಕ್ತಿತ್ವ ತುಂಬಾ ಸ್ಫೂರ್ತಿ ದಾಯಕವಾಗಿದೆ ಎಂದು ನಿರಂಜನ ಜಗದ್ಗುರುಗಳ ಕುರಿತು ಶ್ಲಾಘನಿಯ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ವಿಜಯ್ ಕುಮಾರ್ ಪಿ.ಜಿ ಶ್ರೀರಾಮ್ ಫೈನಾನ್ಸ್ ಲಿ.ನ ಸ್ಟೇಟ್ ಹೆಡ್, ಇನ್ವೆಸ್ಟ್ಮೆಂಟ್ ಮತ್ತು ಇನ್ಸೂರೆನ್ಸ್ ವಿಭಾಗ ಇವರು ಮಾತನಾಡಿ ಶ್ರೀರಾಮ್ ಫೈನಾನ್ಸ್ 51 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯಮ ಪ್ರಾರಂಭಿಸಿ, ಟ್ರಕ್ ಗಳ ಮೇಲೆ ಸಾಲವನ್ನು ಕೊಡುತ್ತಿದ್ದು, ಚಾಲಕರ ಕುಟುಂಬಕ್ಕೆ ಏನಾದರು ಸಹಾಯ ಮಾಡಬೇಕು ಎಂದು ನಿರ್ಧರಿಸಿ ಸಂಸ್ಥೆಯಿಂದ 2013 ರಲ್ಲಿ ಶ್ರೀರಾಮ್ ಫೌಂಡೇಶನ್ ಎಂಬ ಚಾರಿಟೇಬಲ್ ಸಂಸ್ಥೆ ಸ್ಥಾಪಿಸಿ ಇದರ ಮುಖಾಂತರ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ಕೊಡುತ್ತಾ ಬಂದಿದೆ. ಪ್ರತೀ ವರ್ಷ ದೇಶದ ಅನೇಕ ಪ್ರದೇಶಗಳಿಂದ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನೆ ಪಡೆದಿದ್ದಾರೆ. ಇಂದು ಬಳ್ಳಾರಿ , ಕೊಪ್ಪಳ, ವಿಜಯನಗರ ಮೂರು ಜಿಲ್ಲೆಯ 1550 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 67 ಲಕ್ಷ ಪ್ರೋತ್ಸಾಹ ಧನ ಕೊಡುತ್ತಿದ್ದು. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೊಡಲಾಗುವುದು. ವಾಹನ ಚಾಲಕರ ಮಕ್ಕಳು ಈ ಪ್ರೋತ್ಸಾಹ ಧನಕ್ಕೆ ಪಡೆಯಲು ಇಚ್ಚಿಸಿದರೆ ಕಛೇರಿಗೆ ಸಂಪರ್ಕಿಸಿ ಅರ್ಜಿ ಕೊಡಬಹುದು. ಇದಕ್ಕೆ ಕೇಲವು ಷರತ್ತುಗಳಿದ್ದು 7 ನೇ. ತರಗತಿಯಲ್ಲಿ ಶೇ 60% ಅಂಕ ಪಡೆದು 8 ನೇ. ತರಗತಿಯಲ್ಲಿ ಓದುತ್ತಿರಬೇಕು ಅಂತವರಿಗೆ ಪ್ರತೀ ವರ್ಷ 5,000 ರೂ. ಕೊಡಲಾಗುವುದು. ಈ ಯೋಜನೆಯನ್ನು 8 ರಿಂದ 12 ನೇ. ತರಗತಿಯವರೆಗೆ ಶೇ 60% ಅಂಕ ತೆಗೆದು ಕೊಂಡ ಮಕ್ಕಳಿಗೆ ಪ್ರತಿ ವರ್ಷ ಕೊಡುತ್ತಿದ್ದೇವೆ. ಫೈನಾನ್ಸ್ ನಲ್ಲಿ ವಾಹನಗಳ ಮೇಲೆ ಮತ್ತು ವಿವಿಧ ರೀತಿಯ ಸಾಲ ಸೌಲಭ್ಯವಿದೆ. ಗ್ರಾಹಕಾರ ಅನುಕೂಲಕ್ಕೆ ಶ್ರೀರಾಮ ಒನ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ ಅದರ ಸದುಪಯೋಗ ಪಡಿಸಿ. ಕೊಳ್ಳಬಹುದು ಎಂದರು. ” ವೇದಿಕೆ ಮೇಲೆ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ಪ್ರಧಾನ ಮಾಡಲಾಯಿತು “. ಈ ಸಂದರ್ಭದಲ್ಲಿ ಸಭೆ ಅಧ್ಯಕ್ಷತೆ ವಹಿಸಿದ್ದ ಶ್ರೀಧರ ಮಠ ಎಕ್ಸಿಕ್ಯೂಟಿವ್ ಡೈರೆಕ್ಟರ್, ಮುಖ್ಯ ಅತಿಥಿಗಳಾಗಿ ಡಾಕ್ಟರ್ ಟಿ ಮಂಜುನಾಥ ಪೊಲೀಸ್ ಉಪಾಧೀಕ್ಷಕರು ಹೊಸಪೇಟೆ, ವೆಂಕಟೇಶ ರಾಮಚಂದ್ರಪ್ಪ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ವಿಜನಗರ ಜಿಲ್ಲೆ, ಚನ್ನನ ಗೌಡ ಜೋನಲ್ ಬಿಜಿನೆಸ್ ಹೆಡ್, ರಾಘವೇಂದ್ರ ಟಿ ಆರ್ ಬಳ್ಳಾರಿ ಕ್ಲಸ್ಟರ್ ಹೆಡ್, ಪಂಪ ವಿರೂಪಾಕ್ಷ ಸ್ಟೇಟ್ ಕಲೆಕ್ಷನ್ ಹೆಡ್ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ