ರೈತರ ದಾಖಲಾತಿಗಳು ಭೂ ಸುರಕ್ಷಾ ಇ – ಖಜಾನೆಯಲ್ಲಿ ಶೇಖರಣೆ – ಜಿ.ಎಚ್ ಶ್ರೀನಿವಾಸ್.
ತರೀಕೆರೆ ಜ .09

ಬಗರ್ ಹುಕುಂ ಸಾಗುವಳಿ ದಾಖಲೆಗಳನ್ನು ಆಪ್ ನಲ್ಲಿ ಮಾಡಬೇಕು ಮತ್ತು ರೈತರಿಗೆ ಪೋಡಿ, ಪಹಣಿ, ನಕಾಶೆ ಎಲ್ಲವೂ ಸಹ ಇ -ಖಜಾನೆಯಲ್ಲಿ ಶೇಖರಿಸ ಲಾಗುವುದು ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಬುಧವಾರ ತರೀಕೆರೆ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಭೂ ಸುರಕ್ಷಾ,ಭೂ ದಾಖಲೆಗಳ ಇ – ಖಜಾನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸಾರ್ವಜನಿಕರು ಎಲ್ಲಾ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಹಾಕಬೇಕು, ಇಂದು ಮಾನ್ಯ ಮುಖ್ಯಮಂತ್ರಿಗಳು ರಾಜಧಾನಿಯಲ್ಲಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಲ್ಲಿ, ನಾನು ಇಂದು ತರೀಕೆರೆಯಲ್ಲಿ ಇ -ಖಜಾನೆ ಯನ್ನು ಉದ್ಘಾಟನೆ ಮಾಡಿದ್ದು, ಸಾರ್ವಜನಿಕರಿಗೆ ಶಾಶ್ವತವಾಗಿ ದಾಖಲೆಗಳು ಲಭ್ಯವಿರುತ್ತದೆ ಎಂದು ಹೇಳಿದರು.

ಸ್ವಾಗತ ಕೋರಿ ಮಾತನಾಡಿದ ಉಪ ವಿಭಾಗ ಅಧಿಕಾರಿ ಡಾ, ಕೆ ಜೆ ಕಾಂತರಾಜ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಹಳೆಯ ದಾಖಲಾತಿಗಳು ನಶಿಸಿ ಹೋಗುತ್ತಿವೆ ಇನ್ನು ಮುಂದೆ ಭೂಮಿಗೆ ಸಂಬಂಧಪಟ್ಟ ದಾಖಲಾತಿಗಳನ್ನು A, B, C, D , ಎಂದು ವರ್ಗೀಕರಿಸಿ ಇ – ಖಜಾನೆಯಲ್ಲಿ ಶೇಖರಿಸುತಿದ್ದೇವೆ ಈಗಾಗಲೇ 73,522 ಕಡತಗಳನ್ನು ಶೇಖರಿಸಲಾಗಿದೆ. ತಹಶೀಲ್ದಾರ್ ಗ್ರೇಡ್ 2 ನೂರುಲ್ಲಾ ಹುದ ರವರು ಹಾಗೂ ಸಿಬ್ಬಂದಿಗಳು ಶ್ರಮಪಟ್ಟು ಈ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ ರಾದ ಕೃಷ್ಣಮೂರ್ತಿ, ಬಗರ್ ಹುಕುಂ, ಸಕ್ರಮ ಸಮಿತಿ ಸದಸ್ಯರಾದ ಜಗದೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿ ದಳವಾಯಿ, ರೈತ ಸಂಘದ ಮುಖಂಡ ಮಹೇಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ರಾಮಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು