ಮೈಕ್ರೋ ಫೈನಾನ್ಸ್ ವಿರುದ್ಧ ಮಾನ್ವಿಯಲ್ಲಿ ಸಿಡಿದೆದ್ದ – ನಾರಿ ಮಣಿಯರು.
ಮಾನ್ವಿ ಜ.10

ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡುತ್ತಿರುವುದನ್ನು ತಡೆಯಬೇಕು, ಹಾಗು ಸರಕಾರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ನೊಂದ ನೂರಾರು ಮಹಿಳೆಯರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮೈಕ್ರೋ ಫೈನಾನ್ಸ್ ನವರು ನಮಗೆ ಸಾಲ ಕೊಟ್ಟಿದ್ದಾರೆ. ಆದರೆ ಇಂದೇ ಕಟ್ಟಬೇಕು ಎಂದು ಫೈನಾನ್ಸ್ ನವರು ಒತ್ತಾಯ ಮಾಡಿ ಮನೆಯ ಮುಂದೆ ನಿಂತು ಕಿರುಕುಳ ನೀಡುತ್ತಿರುವುದು ತಪ್ಪಬೇಕು ಎಂದು ಒತ್ತಾಯಿಸಿದರು.

ಅಮಾಯಕ ಮಹಿಳೆಯರಿಗೆ ಕಿರುಕುಳ ಕೊಡುತ್ತಿರುವುದರಿಂದ ಕೆಲವರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಹೀಗಾಗಿ ಯಾರಾದರು ಅನಾಹುತ ಮಾಡಿಕೊಂಡರೆ ಇದಕ್ಕೆಲ್ಲ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳೆ ನೇರ ಹೊಣೆ ಎಂದು ಹೋರಾಟಗಾರರು ಕಿಡಿ ಕಾರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ ಮಾನ್ವಿ