ದೆಹಲಿಯಲ್ಲಿ ರೈಲ್ವೇ ಸಚಿವ ವಿ.ಸೋಮಣ್ಣ ಅವರಿಗೆ, ಮಾಜಿ ಶಾಸಕ ರಮೇಶ ಭೂಸನೂರ ರವರು – ಮನವಿ ಸಲ್ಲಿಸಿದರು.
ಸಿಂದಗಿ ಆ.08

ಶೇಡಬಾಳ ವಾಡಿ ರೈಲ್ವೆ ಯೋಜನೆ ಶೀಘ್ರವೇ ಮಂಜೂರಾತಿಗೆ ನವ ದೆಹಲಿಯಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ ಹಾಗೂ ಸಿಂದಗಿ ಮಂಡಲ ಅಧ್ಯಕ್ಷ ಸಂತೋಷ.ಶಂ ಪಾಟೀಲ ಡಂಬಳ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ನಂತರ ಸಚಿವರ ಜೊತೆ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸರ್ವೇ ಕಾರ್ಯ ನಡೆದಿದ್ದು. ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಪಟ್ಟಣ ವಾಣಿಜ್ಯ ಮತ್ತು ವ್ಯವಹಾರಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ವಿಶಿಷ್ಟವಾದ ಸಾಧನೆ ಗೈಯುತ್ತಿರುವ ಪಟ್ಟಣವಾಗಿದೆ. ಇಲ್ಲಿನ ಜನರು ವ್ಯವಹಾರಿಕ ವಹಿವಾಟಿಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೂ ತೆರಳ ಬೇಕಾದ ಅನಿವಾರ್ಯ ಇದೆ. ಆದರೆ ಸಿಂದಗಿ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ಜನರಿಗೆ ಇತರ ರಾಜ್ಯ ಜಿಲ್ಲೆಗಳ ಜೊತೆಗೆ ವ್ಯವಹರಿಸಲು ತೊಂದರೆ ಉಂಟಾಗುತ್ತಿದೆ. ಇಂಡಿ, ಮುದ್ದೇಬಿಹಾಳ. ಬ.ಬಾಗೇವಾಡಿ ಸೇರಿದಂತೆ ಹೋಬಳಿ ಗಳಿಗೂ ಸಹ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯ ಪ್ರಮುಖ ಪಟ್ಟಣ ಎನಿಸಿರುವ ಸಿಂದಗಿ ನಗರಕ್ಕೆ ರೈಲು ಸಂಚಾರ ಇಲ್ಲದಿರುವುದು ವಿಷಾದನೀಯ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹಲವು ಜನ ಪ್ರತಿನಿಧಿಗಳು ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾದರೂ ಯಾರೊಬ್ಬರೂ ಈ ವಿಷಯದ ಬಗ್ಗೆ ಗಂಭೀರತೆ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸಿದರಿಂದ ಸಿಂದಗಿ ಪಟ್ಟಣ ರೈಲು ಸಂಚಾರ ಪಡೆದು ಕೊಂಡಿಲ್ಲಾ. ಆದ್ದರಿಂದ ಇನ್ನಾದರೂ ಸ್ವಾತಂತ್ರ ಪೂರ್ವ ದಿಂದಲೇ (1935) ಬೇಡಿಕೆ ಯಾಗಿರುವ ಶೇಡಬಾಳ ಮತ್ತು ವಾಡಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸ ಬೇಕು. ಈ ಮಾರ್ಗವಾಗಿ ರೈಲು ಸಂಚರಿಸಿದರೆ ಸಿಂದಗಿ ಪಟ್ಟಣ ಸೇರಿ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳು ಈ ಯೋಜನೆ ಜಾರಿ ಗೊಳಿಸಲು ಪ್ರಯತ್ನಿಸ ಬೇಕು. ಈ ಮೂಲಕ ಬಹು ವರ್ಷಗಳ ಬೇಡಿಕೆಯಾದ ಶೇಡಬಾಳ ಮತ್ತು ವಾಡಿ ರೈಲು ಸಂಚಾರ ಯೋಜನೆ ಈಡೇರಲಿ ಎಂದು ಒತ್ತಾಯಿಸಿದರು. ಇದೆ ಸಂದರ್ಭದಲ್ಲಿ ಇಂಡಿ ರೈಲ್ವೆ ನಿಲ್ದಾಣದಲ್ಲಿ ಗದಗ ದಿಂದ ಮುಂಬಯಿಗೆ ಹೋಗುವ ರೈಲ್ವೆಯನ್ನು ಇಂಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಮನವಿ ಪತ್ರ ಕೂಡಾ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಆದಷ್ಟು ಬೇಗನೆ ಈ ಎರಡು ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ರಮೇಶ ಭೂಸನೂರ ಮಂಡಲ ಅಧ್ಯಕ್ಷರಾದ ಶ್ರೀ ಸಂತೋಷ ಪಾಟೀಲ ಬಾಳು ಮುಳಜಿ ಪ್ರಭು ಹೊಸಮನಿ ಹಾಜರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ

