6 ಭಾರಿ ರಾಜಾ ಶುಭಾಶ್ಚಂದ್ರ ನಾಯಕ ಅಧ್ಯಕ್ಷರಾಗಿ – ಅವಿರೋಧವಾಗಿ ಆಯ್ಕೆ.
ಮಾನ್ವಿ ಜ.11

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ರಾಜಾ ಶುಭಾಶ್ಚ್ರಂದ್ರ ನಾಯಕ ಅವಿರೋಧವಾಗಿ ಆಯ್ಕೆ ಯಾದರೆ. ಉಪಾಧ್ಯಕ್ಷರಾಗಿ ನೀಲಕಂಠಪ್ಪಗೌಡ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಎಂ.ಅಶೋಕ ಕುಮಾರ್ ತಿಳಿಸಿದರು.
ರಾಜಾ ಶುಭಾಶ್ಚಂದ್ರ ನಾಯಕ ಅವರು ಈ ಹಿಂದೆ ಕೂಡ ಅವಿರೋಧವಾಗಿ ಆಯ್ಕೆ ಯಾಗಿದ್ದು. ಒಟ್ಟು 6 ಭಾರಿ ರಾಜಾ ಶುಭಾಶ್ಚಂದ್ರ ನಾಯಕ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ರಾಜಾ ಶುಭಾಶ್ಚಂದ್ರ ನಾಯಕರ ಸೇವೆಯನ್ನು ಮೆಚ್ಚಿ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆ ಯಾಗಲು ಪ್ರಮುಖ ಕಾರಣವಾಗಿದ್ದಾರೆ.
ರಾಜಾ ಶುಭಾಶ್ಚಂದ್ರ ನಾಯಕರು ಮಾತನಾಡಿ ಕಳೆದ 6 ಭಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಲು ಸದಸ್ಯರೆ ಕಾರಣ, ಹೀಗಾಗಿ ರೈತರ ಪರವಾಗಿ ಕೆಲಸ ಮಾಡಲು ಸದಸ್ಯರ ಒಪ್ಪಿಗೆಯಂತೆ ನಡೆಯುತ್ತೇನೆ ಎಂದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ