ಸ್ವಚ್ಛ ಪರಿಸರದ ನಿರ್ಮಾಣದಲ್ಲಿ ಸಂಡೆ ಫಾರ್ ಸೋಷಿಯಲ್ ವರ್ಕ್ ನ ಪರಿಶ್ರಮ ಎಲ್ಲರಿಗೂ ಮಾದರಿ – ಅಮರೇಗೌಡ ಮಲ್ಲಾಪುರ.
ಸಿಂಧನೂರು ಜ.12

ನಗರದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ (BRC) ದ ಆವರಣದಲ್ಲಿ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಸ್ಕಿ ಹಾಗೂ ವನಸಿರಿ ಫೌಂಡೇಶನ್ (ರಿ) ರಾಯಚೂರು ಸಹಯೋಗದಲ್ಲಿ 184 ನೇ. “ಸಂಡೆ ಫಾರ್ ಸೋಷಿಯಲ್ ವರ್ಕ್” ಅಭಿಯಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಸ್ಕಿಯ ಅಭಿನಂದನ್ ಸಂಸ್ಥೆಯ ಸ್ವಚ್ಛ ಭಾರತದ ಗುರಿಯನ್ನು ಹೊತ್ತು ಸಾಗುತ್ತಿರುವ “ಸಂಡೆ ಫಾರ್ ಸೋಷಿಯಲ್ ವರ್ಕ್” ಅಭಿಯಾನವು ಒಂದು ವಾರವನ್ನೂ ಬಿಡದೇ 184 ವಾರಗಳನ್ನು ಯಶಸ್ವಿ ಯಾಗಿ ಮುಗಿಸಿದೆ. 184 ನೇ. ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು. ಇದೇ ವೇಳೆ ಆವರಣದಲ್ಲಿ ಇದ್ದಂತಹ ಕಸಗಳನ್ನು,ಪ್ಲಾಸ್ಟಿಕ್ ಗಳನ್ನು, ಹಾಗೂ ಇನ್ನಿತರ ಕಸಗಳನ್ನು ತೆಗೆದು ಸ್ವಚ್ಛತೆ ಗೊಳಿಸಲಾಯಿತು. ಆವರಣದಲ್ಲಿನ ಗಿಡಗಳ ಸುತ್ತ ಪಾತಿ ಮಾಡಿ ಗಿಡಗಳಿಗೆ ನೀರುಣಿಸಲು ಅನುಕೂಲ ಮಾಡಲಾಯಿತು.

ಸ್ವಚ್ಛತೆ ಸೇವಾ ಕಾರ್ಯದ ನಂತರ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪುರ ಅವರು ಅಭಿನಂದನ್ ಸಂಸ್ಥೆಯು ಬಹಳ ವರ್ಷದಿಂದ ಸಾಮಾಜಿಕ ಸೇವೆಯಲ್ಲಿ ಸಕ್ರಿಯ ವಾಗಿರುವುದು ಶ್ಲಾಘನೀಯ. ಅದರಲ್ಲೂ ಇಂದು ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಸ್ವಚ್ಛತೆಯ ಕಾರ್ಯಕ್ಕಾಗಿ ನಡೆಯುತ್ತಿರುವ ಸಂಡೇ ಫಾರ್ ಸೋಶಿಯಲ್ ವರ್ಕ್ ಸೇವಾ ಕಾರ್ಯವು ಬಹಳಷ್ಟು ಅತ್ಯುತ್ತಮ ರೀತಿಯಲ್ಲಿ ಸಾಗುತ್ತಿದೆ. ಇದು ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಈ ಅಭಿಯಾನ ಇನ್ನೂ ಹೆಚ್ಚು ಕೀರ್ತ ಪಡೆದು ದೇಶದ ತುಂಬ ಬೆಳೆಯಲಿ ಎಂದರು. ಈ ಸೇವಾ ಕಾರ್ಯದಲ್ಲಿ ಸಿಂಧನೂರು ಕ್ಷೇತ್ರ ಸಮನ್ವಯಾಧಿಕಾರಿಗಳು ಬಸವಲಿಂಗಪ್ಪ ರವರು, BRP ಗಳಾದ ರವಿ ಪವಾರ್ ಸರ್, ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಆದೇಶ ನಿರ್ದೇಶಕರು ಶಿಕ್ಷಕರ ಸಂಘ, ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಹುಸೇನ್ ಭಾಷಾ, ವನಸಿರಿ ಪೌಂಡೇಷನ್ ಮಸ್ಕಿ ತಾಲೂಕು ಅಧ್ಯಕ್ಷ ರಾಜು ಬಳಗಾನೂರು, ಅಭಿನಂದನ್ ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ, ಕಿಶೋರ, ಯಂಕಪ್ಪ,ವನಸಿರಿ ಪೌಂಡೇಷನ್ ಸದಸ್ಯರಾದ ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಉಪಸ್ಥಿತರಿದ್ದರು.