ಗಣರಾಜ್ಯೋತ್ಸವ ಪ್ರಯುಕ್ತ – ಕಲಿಕಾ ಸಪ್ತಾಹ ಕಾರ್ಯಕ್ರಮ.
ನಂದವಾಡಗಿ ಜ.13

ಬಾಗಲಕೋಟೆ ಜಿಲ್ಲೆಯ ಹುನಗುಂದ/ಇಲಕಲ್ ತಾಲೂಕಿನ ಸ.ಹೆ.ಮ.ಹಿ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಕಲಿಕಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಕ್ಕಳಲ್ಲಿ ಕಲಿಕೆ ಬಲಗೊಳ್ಳಲು ಹಾಗೂ ಸ್ಪರ್ಧಾ ಮನೋಭಾವನೆಯನ್ನು ಮೂಡಿಸಲು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಲಿಕಾ ಸಪ್ತಾಹ ಕಾರ್ಯಕ್ರಮವನ್ನು ಶಾಲಾ ಮಂತ್ರಿ ಮಂಡಲದವರು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶಾಲೆಯ ಮುಖ್ಯ ಗುರುಮಾತೆ ವಿ.ಬಿ ಕುಂಬಾರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣರಾಜ್ಯೋತ್ಸವ ಅಂಗವಾಗಿ ಶಾಲೆಯಲ್ಲಿ ಏಳು ದಿನಗಳ ವರೆಗೆ ಕಲಿಕೆಗೆ ಸಂಬಂಧಪಟ್ಟಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾಷಣ, ಪ್ರಬಂಧ,ಅಭಿನಯ ಗೀತೆ, ಕಥೆ ಹೇಳುವುದು, ರಸಪ್ರಶ್ನೆ ಕಾರ್ಯಕ್ರಮ, ಉಕ್ತಲೇಖನ, ಚಿತ್ರಕಲೆ, ರಂಗೋಲಿಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇವುಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಲು ಹಾಗೂ ಕಲಿಕೆಯನ್ನು ಮತ್ತಷ್ಟು ಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಗಣರಾಜ್ಯೋತ್ಸವ ದಿನದಂದು ಪಾರಿತೋಷಕವನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ಶಾಲಾ ಮುಖ್ಯ ಗುರುಮಾತೆ ವಿ.ಬಿ ಕುಂಬಾರ. ಮುಖ್ಯ ಅತಿಥಿ ಸ್ಥಾನವನ್ನು ಸಹ ಶಿಕ್ಷಕಿಯರಾದ ಜ್ಯೋತಿ, ಜಿ ಆರ್ ನದಾಫ್, ಸಹ ಅತಿಥಿ ಸ್ಥಾನವನ್ನು ಸಹ ಶಿಕ್ಷಕರಾದ ಬಸವರಾಜ ಬಲಕುಂದಿ, ಡಾ, ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಕು ಅಶ್ವಿನಿ ಕಪ್ಪರದ ಹಾಗೂ ಮಂತ್ರಿ ಮಂಡಲದ ಸದಸ್ಯರು ಯಾಸ್ಮಿನ್ ಬೇಗಂ ಹೂಲಗೇರಿ, ಅಪೂರ್ವ ಕಟಗಿ ಹಾಜರಿದ್ದು ಯಶಸ್ವಿ ಗೊಳಿಸಿದರು. ಬಸವರಾಜ ಬಲಕುಂದಿ ಕಾರ್ಯಕ್ರಮವನ್ನು ನಿರೂಪಿಸಿದರು, ಚಂದ್ರಶೇಖರ ಹುತಗಣ್ಣ ಸ್ವಾಗತಿಸಿದರು, ಅಶ್ವಿನಿ ಕಪ್ಪರದ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ