ವೃತ್ತಿ ಬದುಕಿಗಿಂತಲೂ ಮೀರಿದ್ದು ಸ್ನೇಹ ಸಂಬಂಧ — ಲೌಕಿಕ ಜೀವನದ ಅಸಮಾಧಾನಕ್ಕೆ ಲಿಂಗ ಯೋಗದಿಂದ ಮುಕ್ತಿ.

ಹುನಗುಂದ ಆಗಷ್ಟ.6

ವೃತ್ತಿ ಬದುಕಿಗಿಂತಲೂ ಮೀರಿದ್ದು ಸ್ನೇಹ ವೃತ್ತಿ ಬದುಕಿನ ಉನ್ನತ ಸ್ಥಾನಕ್ಕಿಂತಲೂ ಮೀರಿದ್ದು ಸ್ನೇಹ ಸಂಬಂಧ ಮತ್ತು ವಿದ್ಯಾರ್ಜನೆ ಮೂಲಕ ಸನ್ಮಾರ್ಗದಲ್ಲಿ ಕೊಂಡ್ಯೋಯ್ದ ಗುರುಗಳಿಗೆ ಸನ್ಮಾನಿಸಿ ಗೌರವ ನೀಡುವ ಪರಂಪರೆ ನಿಜಕ್ಕೂ ಮೆಚ್ಚುವಂತದ್ದು ಎಂದು ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಹೇಳಿದರು.ಪಟ್ಟಣದ ರಾಷ್ಟೀಯ ಹೆದ್ದಾರಿ ೫೦ರ ಪಕ್ಕದಲ್ಲಿರುವ ಎಂ.ಆರ್‌ಗಾರ್ಡನ್‌ನಲ್ಲಿ ೧೯೯೦-೯೧ ನೆಯ ಸಾಲಿನ ವಿಜಯ ಮಹಾಂತೇಶ ಪ್ರೌಢ ಶಾಲೆ ಮತ್ತು ವಿ.ಮ ಬಾಲಿಕೆಯರ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ವೃತ್ತಿ ಬದುಕು ಮತ್ತು ಸಂಸಾರದ ಜಂಜಾಟವನ್ನು ಬಿಟ್ಟು ಸಹಜ ಸ್ಥಿತಿಯಲ್ಲಿ ಇರುವ ಭಾವನೆ ಬಹಳ ಶ್ರೇಷ್ಠವಾದುದು.ತಾಯಿಗಿಂತಲೂ ಹೆಚ್ಚು ಕರುಣೆ,ಪ್ರೀತಿ ವಿಶ್ವಾಸ ಗುರುಗಳಲ್ಲಿ ಇರುತ್ತದೆ.ಗುರುಗಳಿಂದ ಯಾರು ಪೆಟ್ಟು ತಿಂದಿರುತ್ತಾರೋ ಅಂತಹ ವಿದ್ಯಾರ್ಥಿ ಖಂಡಿತ ಸನ್ಮಾರ್ಗದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುತ್ತಾರೆ.ಹುನಗುಂದದ ವಿಜಯಮಹಾಂತೇಶ ಪ್ರೌಢ ಶಾಲೆಯ ಭಕ್ತಿ ಮತ್ತು ಸಂಸ್ಕಾರ ಭೂಮಿಯಾಗಿದೆ.ಲೌಕಿಕ ಜೀವನ ಅಸಮದಾನ,ಅಶಾಂತಿಯಿಂದ ಕೂಡಿದ್ದು ಇಂತಹ ಜೀವನಕ್ಕೆ ಲಿಂಗ ಯೋಗ ಬಹಳ ಮುಖ್ಯವಾಗಿದೆ.ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿಕೊಡಬೇಕು ಎಂದರು.ವಿಶ್ರಾಂತ ಮುಖ್ಯೋಪಾದ್ಯಾಯ ಎಂ.ಎನ್.ತೆನಹಳ್ಳಿ ಮಾತನಾಡಿ ಜೀವನದಲ್ಲಿ ಸಾಧನೆ ಮತ್ತು ಆದರ್ಶದ ಬದುಕು ಬಹಳ ಮುಖ್ಯ.ಜನ್ಮ ನೀಡಿದ ತಾಯಿ.ಬದುಕು ಕಲಿಸಿದ ತಂದೆ,ಸಂಸ್ಕಾರ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು.

ಈ ಸ್ಥಾನಗಳ ಗೌರವವೇ ಈ ಕಾರ್ಯಕ್ರಮ ನಡೆಸಲು ಪ್ರೇರಣೆಯಾಗಿವೆ.ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದ್ದಕ್ಕಿಂತ ಗೌರವದಿಂದ ಸನ್ಮಾನಿಸುವುದು ಬಹಳ ಮುಖ್ಯ ಎಂದರು.ವಿ.ಮ.ವಿ.ವ ಸಂಘದ ಆಡಳಿತಾಧಿಕಾರಿ ಶಶಿಕಲಾ ಎನ್ ಮಾತನಾಡಿ ಬಾಲ ಭಾವನೆಗಳನ್ನು ಒಗ್ಗೂಡಿಸಿಕೊಂಡು ಹೆಮ್ಮರವಾಗಿ ೩೨ ವರ್ಷಗಳ ಹಿಂದಿರುವ ಭಾವನೆಗಳ ಸ್ಮೃತಿಪಟಲದ ಮೇಲೆ ಅವರ ಬಾಂಧವ್ಯದ ಖುಷಿ ಕ್ಷಣಗಳನ್ನು ಆಸ್ವಾದಿಸುವ ಅವಕಾಶವನ್ನು ಮಾಡಿದ್ದು ನಿಜಕ್ಕೂ ನನಗೆ ಖುಷಿ ತಂದಿದೆ ಎಂದರು.ವಿಶ್ರಾಂತ ಮುಖ್ಯೋಪಾದ್ಯಾಯ ಎ.ಓ.ಬಿರಾದಾರ ಮಾತನಾಡಿ ಜೀವನವನ್ನು ಅರಿಯದ ಮುಗ್ಧ ಬಾಲಕ ಬಾಲಿಕಯರು ಭೂಮಿಗೆ ಬಿದ್ದ ಬೀಜಕ್ಕೆ ಅಂದು ನಾಲ್ಕು ಬೊಗಸೆ ನೀರು ಎರೆದವರು ನಾವು ಇಂದು ಬೀಜ ಬೆಳೆದು ಹೆಮ್ಮರವಾಗಿ ವಿವಿಧ ಉನ್ನತ ಹುದ್ದೆಯಲ್ಲಿದ್ದು ಕಲಿಸಿದ ಗುರುವಿಗೆ ವೇದಿಕೆಯ ಮೇಲೆ ಕೂಡಿಸಿ ಗೌರವಿಸುತ್ತಿರುವ ಈ ಕ್ಷಣ ಮರೆಯಲಾರದಂತದ್ದು ಎಂದರು.ವಿಶ್ರಾಂತ ಮುಖ್ಯೋಪಾದ್ಯಾಯ ವ್ಹಿ.ವ್ಹಿ.ಪತ್ತಾರ,ಶಿಕ್ಷಕ ಎಸ್.ಕೆ.ಕೊನೆಸಾಗರ ಮಾತನಾಡಿದರು.ಈ ವೇಳೆ ೧೯೯೦-೯೧೦ನೆಯ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಲಿಸಿದ ಗುರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಲಿಂಗೈಕ್ಯರಾದ ಶಿಕ್ಷಕರ ಹಾಗೂ ಸ್ನೇಹಿತರ ಕುಟುಂಬಕ್ಕೆ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಬಿ.ಎಸ್.ಬನ್ನಟ್ಟ,ನಿವೃತ್ತಿ ಶಿಕ್ಷಕರಾದ ಬಿ.ಎಸ್.ಪಾಟೀಲ,ಎಸ್.ಎಸ್.ದರಗಾದ,ಬಿ.ಸಿ.ಅಂಗಡಿ,ಬಿ.ಎಸ್.ಕುಲಕರ್ಣಿ,ಅರುಣಾ ಎಸ್.ಕೆ.ಎಸ್.ವ್ಹಿ,ಹಾಸಲಕರ,ಬಿ.ಎಂ.ಲೈನದ,ದೊಡ್ಡಬಸಪ್ಪ.ಬಿ,ಎಲ್.ಎಂ.ಹಿರೇಮಠ,ಎಸ್.ಎಂ.ಮೀರಾಖೋರ,ಎಂ.ಎಂ.ತುಂಬಲಗಡ್ಡಿ,ಎಸ್.ಎಸ್.ಬಳೂಟಗಿ,ಜಿ.ಕೆ.ಭೂಸಾರೆ,ಸಿ.ಎಸ್.ಹೊನವಾಡಗೌರಮ್ಮ ಹಿರೇಮಠ,ಎಸ್.ಎಚ್.ಹೊಸಮನಿ,ಸಂಗು ಮಠ,ಬಸವರಾಜ ಯಡಹಳ್ಳಿ,ಸ್ನೇಹಿತರಾದ ನೀಲಪ್ಪ ತಪೇಲಿ,ಅಪ್ಪು ಆಲೂರ,ಶರಣು ಅಮರಾವತಿ,ರಾಜು ಅಮರಾವತಿ,ಮಹಾಂತೇಶ ಪಾಟೀಲ,ಮಹಾಂತೇಶ ಗಟ್ಟಿಗನೂರ,ಅಮರಪ್ಪ ಹುನಕುಂಟಿ,ಮಲ್ಲು ಬಾದವಾಡಗಿ,ವಿನಾಯಕ ಜನಾದ್ರಿ,ಮಹಾಂತೇಶ ಹುನ್ನಳ್ಳಿ,ಕುಸುಮಾ ಬಾಲರಡ್ಡಿ,ಶಾಂತವ್ವ ಗಂಗೂರ,ಭಾರತಿ ಹುಣಸಿಗಿಡದ,ಗೌರವ್ವ ವಾಲಿ ಸೇರಿದಂತೆ ಅನೇಕರು ಇದ್ದರು. ‌

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button