ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.
ಉಜ್ಜಯಿನಿ ಜೂನ್.19

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿಯಲ್ಲಿ 19 ಜೂನ್ 2024 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಿ ರೇವಣಸಿದ್ದೇಶ್ವರ ಹಾಗೂ ಉಪಾಧ್ಯಕ್ಷರಾಗಿ ಡಾಕ್ಟರ್ ವೆಂಕಟೇಶ್ ಇವರು ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಲ್ಲಿ ಉಪಾಧ್ಯಕ್ಷರಾದಂತಹ ದ್ವಾರ್ಕೇಶ್ ಸ್ವಾಮಿ ಅವರು ಹಾಗೂ ಮಾಜಿ ಉಪಾಧ್ಯಕ್ಷರಾದಂತ ಎಂ ಗುರುಸಿದ್ದನಗೌಡ್ರು ಹಾಗೂ ಕ್ಷೇತ್ರ ಅಧಿಕಾರಿಗಳಾದ ಕೊಟ್ರೇಶ್ ಅಂಬಳಿ ಅವರು ಎಸ್ ಕೊಡದಪ್ಪ, ವಿ ಲೋಕೇಶ್,ಬಿ ಡಿ ಸೋಮಣ್ಣ ಬೆನಕನಹಳ್ಳಿ ಹಾಗೂ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಡಿ ರಿಜ್ವಾನ್ ಸಾಹೇಬ್ ಡಿ ಹೋಬಳೇಶ್ ಎ ತಿಮ್ಮಣ್ಣ ಹಾಗೂ ಎಲ್ಲಾ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಕೋರಿದರು ಇನ್ನಿತರರು ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್ ಸಿ.ಕೊಟ್ಟೂರು.