ಮಹತ್ವದ ಹಾಗೂ ಉತ್ತಮ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು – ಶಾಸಕ ಜಿ.ಎಸ್ ಪಾಟೀಲ್.
ರೋಣ ಜ.13

ನಗರದ ಪುರಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಎಸ್ ಪಾಟೀಲ್ ರವರು ಚಾಲನೆ ನೀಡಿದರು. ಹಲವಾರು ಪೂಜಾ ಸಂಪ್ರದಾಯಗಳ ಮುಖಾಂತರ ಭೂಮಿ ಪೂಜೆಯನ್ನು ಆರಂಭಿಸಿ ಈ ವಿಷಯ ಕುರಿತು ಕಾರ್ಯಕ್ರಮದಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಮಾಡುವುದರಿಂದ ಶಾಶ್ವತ ಬಾಳಿಕೆ ಬರುತ್ತವೆ. ಆ ನಿಟ್ಟಿನಲ್ಲಿ ಗುತ್ತಿಗೆದಾರರು ಕೆಲಸ ಮಾಡಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಪುರಸಭೆ – ಅವರಣದಲ್ಲಿ ವಿವಿಧ ಅಭಿವೃದ್ಧಿ 7 ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೋಣ ಪಟ್ಟಣದಲ್ಲಿ ಸದಸ್ಯರು – ಒಟ್ಟುಗೂಡಿ ಮುಖ್ಯ ರಸ್ತೆಗಳಲ್ಲಿರುವ ಅಕ್ರಮ ಗೂಡಂಗಡಿ ತೆರವು ಗೊಳಿಸಿ ಸುಸಜ್ಜಿತ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಇದಕ್ಕೆ ಜನರು ಸಹಕಾರ ನೀಡಿರುವುದು ಸಂತಸದ ಸಂಗತಿ ಪಟ್ಟಣದಲ್ಲಿ ಇನ್ನೂ ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದ್ದು ಅವುಗಳನ್ನು ಪಟ್ಟಿ ಮಾಡಲಾಗಿದ್ದು ₹13 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ಮಾಡಿರುವ ಬಗ್ಗೆ ಪುರಸಭೆಯವರು ಗಮನಕ್ಕೆ ತಂದಿದ್ದು ಈ ವಿಷಯಕ್ಕೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದು ಅವರಿಂದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದರು. 2013 ಹಾಗೂ 18 ರ ಅವದಿಯಲ್ಲಿ ರೋಣ ಪಟ್ಟಣದಲ್ಲಿರುವ ಕೆರೆಯ ಸೌಂಧರ್ಯಕರಣ ಗೊಳಿಸಲು 2 ಕೋಟಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 1 ಕೋಟಿ 60 ಲಕ್ಷ ರೂ. ಗಳನ್ನು ಖರ್ಚು ಮಾಡಿದ್ದರು. ನಂತರ ಅಭಿವೃದ್ಧಿ ಕಾರ್ಯ ಸ್ಥಗಿತ ಗೊಂಡಿತ್ತು. ಈಗ ಉಳಿದ 40 ಲಕ್ಷ ಅನುದಾನದ ಜೊತೆಗೆ ಮತ್ತೆ 50 ಲಕ್ಷ ಅನುದಾನವನ್ನು ಒದಗಿಸಲಾಗಿದ್ದು, ಈ ಕಾರ್ಯ ಕೂಡ ಶೀಘ್ರ ಮುಗಿಯಲಿದೆ ಎಂದರು. ಅವರು ರೋಣ ಹಾಗೂ ಜಿಗಳೂರ ಕೆರೆಗಳ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿ ತಾಣಗಳಾಗಿ ಮಾರ್ಪಡಿಸುವ ಗುರಿಯನ್ನು ಹೊಂದಿದೆ ಎಂದರು.ಈಗಾಗಲೇ ಪಟ್ಟಣದಲ್ಲಿ ಡಬಲ್ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಸೇರಿ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, 13 ಕೋಟಿ ರೂ. ವೆಚ್ಚದಲ್ಲಿ ಅಬ್ಬಿಗೇರಿ ರಸ್ತೆಯ ಮಲಪ್ರಭಾ ಬಲದಂಡೆಯಿಂದ ಮುದೇನಗುಡಿ ಕ್ರಾಸ್ ವರೆಗೆ ಸಿ.ಸಿ ರಸ್ತೆ ಮತ್ತು 7 ಕೋಟಿ ರೂ ಗಳ ವೆಚ್ಚದಲ್ಲಿ ಕುರಹಟ್ಟಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದ ಅವರು ರೋಣ ಪಟ್ಟಣದ ಸಮಗ್ರ ಅಭಿವೃದ್ಧಿಗೆ 13 ಕೋಟಿ ರೂ ಗಳ ನೀಲ ನಕ್ಷೆಯನ್ನು ಸಿದ್ದ ಪಡಿಸಿದ್ದು ಶೀಘ್ರ ಅನುದಾನ ಬಿಡುಗಡೆ ಯಾಗಲಿದೆ ಎಂದರು.ಇನ್ನೂ ರೈತರ ಹಿತದೃಷ್ಟಿಯಿಂದ 2 ಎಕರೆ ಜಮೀನಿನಲ್ಲಿ 10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣಕ್ಕೆ ಸಹ ಮುಂದಾಗಿದೆ. ಅಲ್ಲದೆ ತಾಲೂಕಿನ ಶಾಲಾ ಕೊಠಡಿಗಳ ಸುರಕ್ಷತೆಗಾಗಿ ಸಿ.ಎಂ ವಿಶೇಷ ನಿಧಿಯಿಂದ ೨ ಕೋಟಿ, ಜೊತೆಗೆ ಎಸ್.ಆರ್ ಪಾಟೀಲ ಶಾಲಾ ಅಭಿವೃದ್ಧಿಗೆ 50 ಲಕ್ಷ ರೂ ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು ಪುರಸಭೆಯ ವ್ಯಾಪ್ತಿಯಲ್ಲಿರುವ 37 ಎಕರೆ ಜಮೀನಿನಲ್ಲಿ ಬಡವರಿಗೆ ಆಶ್ರಯ ಒದಗಿಸಲು ಪುರಸಭೆ ಮುಂದಾಗಬೇಕು ಮುಖ್ಯವಾಗಿ ಪುರಸಭೆಯ ನೂತನ ಕಟ್ಟಡಕ್ಕೆ ಶೀಘ್ರ ಭೂಮಿ ಪೂಜೆ ನಡೆಸಲಾಗುವುದು ಎಂದು ಶಾಸಕ ಜಿ.ಎಸ್ ಪಾಟೀಲ ತಿಳಿಸಿದರು. ಸಂಗನಗೌಡ ಪಾಟೀಲ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ವಿ.ಆರ್ ಗುಡಿಸಾಗರ, ಬಸವರಾಜ ನವಲಗುಂದ, ಯೂಸುಪ್ ಇಟಗಿ, ಗದಿಗೇ ಕಿರೇಸೂರ, ಬಾವಾಸಾಬ ಬೆಟಗೇರಿ ನಾಜಬೇಗಂ ಯಲಿಗಾರ, ವಿದ್ಯಾ, ದೊಡ್ಡಮನಿ, ಹೊಸಮನಿ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ