“ಯುವಕರ ಸ್ಪೂರ್ತಿಯ ಯುಗ ಪುರುಷ ಸ್ವಾಮಿ ವಿವೇಕಾನಂದರು”…..

ಯುವಕರ ಸ್ಪೂರ್ತಿಯ ಯುಗ ಪುರುಷ
ಸ್ವಾಮಿ ವಿವೇಕಾನಂದರು
ವಿಶ್ವದಿ ಸನ್ಯಾಸತ್ವಕ್ಕೆ ಮೆರಗು ತಂದವರು
ವಿಶಾಲ ಜಗದ ನಿರ್ಭಯತೆಯ ಶ್ರೇಷ್ಠ
ತತ್ವಜ್ಞಾನಿ
ರಾಮಕೃಷ್ಣ ಪರಮಹಂಸರ ಶಿಷ್ಯ ವೇದಾಂತ
ರಾಜಯೋಗ ಕರ್ಮಯೋಗ
ಭಕ್ತಿಯೋಗ ಜ್ಞಾನಯೋಗ
ಸಿರಿ ಹಂಚಿದ ಸಮಾಜವಾದಿ
“ಏಳಿ ಎದ್ದೇಳಿ ಗುರಿ ಮುಟ್ಟುತನಕ ನಿಲ್ಲದಿರಿ”
ದೇಶದ ಯುವಕರ ಹುರದುಂಬಿದ
ಮಹಾಪುರುಷ
ಸರ್ವರಲ್ಲೂ ದೇವನ ತೋರಿದ ವಿಶ್ವಜ್ಞಾನಿ
ವಿಶ್ವದೆಲ್ಲಡೆ ಸಹೋದರ ಸಹೋದರಿಯ
ಭಾವ ಬೆಸೆದ ಚಿರಸ್ಮರಣೀಯ
ಸ್ವತಃ ಮೋಕ್ಷಕ್ಕಾಗಿ
ಜಗದ ಹಿತಕ್ಕಾಗಿ ಸಂಚಾರ ಗೈದ ವೀರಾಗಿ
ಭಾರತ ಭೂಮಿ ನಮ್ಮ ಪರಂಧಾಮ
ಭಾರತದ ಶುಭವೇ ನಮ್ಮ ಶುಭವೆಂದ
ಭಾರತಾಂಬೆಯ ವಿವೇಕಾಚಿಂತಾಮಣಿ
ದೌರ್ಬಲ್ಯ ದಹಿಸಿ ವೀರತ್ವದಿ ಸಾಧಿಸಿ
ಯುವಕರಿಗೆ ಸ್ಪೂರ್ತಿಯ
ಯುಗ ಪುರುಷ ಚಿರಾಯು
ಜಗದ ಜನಮನದಲಿ”ರಾಷ್ಟ್ರೀಯ ಯುವ ದಿನ”
ವಿಶ್ವ ಮೆಚ್ಚಿದ ಆಧ್ಯಾತ್ಮಿಕ ಗುರು
ಸ್ವಾಮಿ ವಿವೇಕಾನಂದರಿಗೆ ಜನ್ಮದಿನ ಪುಷ್ಪ
ನಮನಗಳು

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ