ಕ.ದ.ಸಂ.ಸ ಹರಿಹರ ಚಲೋ ಕರಪತ್ರ ಬಿಡುಗಡೆ – ತರೀಕೆರೆ.ಎನ್ ವೆಂಕಟೇಶ್.
ತರೀಕೆರೆ ಜ.15

ದಲಿತರ ಶೋಷಿತರ ಧ್ವನಿಯಾಗಿದ್ದ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ರವರ ಸಮಾಧಿ ಸ್ಮಾರಕ ಭವನದಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರ ಮತ್ತು ಸರ್ವ ಸದಸ್ಯರ ಸಭೆಗೆ ಹರಿಹರ ಚಲೋ ಕಾರ್ಯಕ್ರಮ ಏರ್ಪಡಿಸಲಾಗಿದೆ, ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ.ಎನ್ ವೆಂಕಟೇಶ್ ಹೇಳಿದರು. ಅವರು ಇಂದು ಪ್ರವಾಸಿ ಮಂದಿರದಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಪಾಂಡುರಂಗ ಸ್ವಾಮಿ ರವರ ನೇತೃತ್ವದಲ್ಲಿ ಕ.ದ.ಸಂ.ಸ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ರಿ, ನಂ 386/2020-21 ರ ಸಂಘಟನೆಯು ರಾಜ್ಯದಲ್ಲಿ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಜನವರಿ 25,26 ರಂದು ರಾಜ್ಯ ಮಟ್ಟದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಸಂಘಟನೆಯೂ ಭೂಮಿ ಹೋರಾಟವನ್ನು ಕೈಗೆತ್ತಿ ಕೊಂಡಿದೆ ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭೂ ರಹಿತರ ಆದಿವಾಸಿಗಳಿಗೆ ಮನೆ ನಿವೇಶನ ಜಮೀನು ನೀಡಲು ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಮಾಡಲಾಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸಹ ಭೂಮಿಗಾಗಿ ಹೋರಾಟ ರೂಪಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತರೀಕೆರೆ ತಾಲೂಕು ಸಂಚಾಲಕರಾದ ಎನ್.ಹೆಚ್ ಬಸವರಾಜ್, ಸಂಘಟನಾ ಸಂಚಾಲಕರಾದ ಬಿ.ಕೃಷ್ಣ ನಾಯಕ, ಕೋರನಹಳ್ಳಿ ತಿಮ್ಮಪ್ಪ, ಕುಂಟಿನಮಡು ನಾಗರಾಜು, ಎರೇಹಳ್ಳಿ ರಂಗಸ್ವಾಮಿ, ಕಲ್ಲತ್ತಿಪುರ ವೆಂಕಟೇಶ್, ಬೈರನಾಯಕನಹಳ್ಳಿ, ಗುರುಮೂರ್ತಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು