ತಾಲೂಕಾ ಆಡಳಿತ ಸೌಧದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಕೆ.ಡಿ.ಪಿ ಸಭೆ ಕರೆದು ಅಭಿವೃದ್ಧಿಗೆ ಮುಂದಾದ ಶಾಸಕರು.
ಮೊಳಕಾಲ್ಮುರು ಜೂನ್.14

ಮೊಳಕಾಲ್ಮುರು ತಾಲೂಕಾ ಆಡಳಿತ ಸೌಧ ಸಭಾಂಗಣದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಎನ್ ವೈ ಗೋಪಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.ಸಭೆ ಜರುಗಿತು.ಎಲ್ಲಾ ಇಲಾಖೆಗಳ ಪ್ರಗತಿಯನ್ನು ಸಾಧಕ ಬಾಧಕಗಳನ್ನು ಪರಿಶೀಲಿಸಿದರು ಯಾವ ಯಾವ ಕೆಲಸಗಳು ಆಗಬೇಕು ಈಗ ಎಷ್ಟು ಕಾಮಗಾರಿಗಳ ಮುಗಿದಿವೆ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟ ಶಾಸಕರು ಈ ಸಂದರ್ಭದಲ್ಲಿ ಮುಖ್ಯವಾಗಿ ಶಿಕ್ಷಣ, ಕೃಷಿಗೆ ಸಮಗ್ರ ಬಿತ್ತನೆ ಬೀಜ, ಕುಡಿಯುವ ನೀರು.ಅಂತರ್ಜಲ ಅಭಿವೃದ್ದಿ ಆರೋಗ್ಯ. ಅರಣ್ಯ ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅಲ್ಲದೇ ಕ್ಷೇತ್ರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಶಿಸ್ತು ಬದ್ದವಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.ಕೆ.ಡಿ.ಪಿ.ಸಭೆಗೆ ಹೊಸದಾಗಿ ನಾಮ ನಿರ್ದೇಶಿತ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಿದೆ.ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು.