ಹುನಗುಂದ ಮತ ಕ್ಷೇತ್ರದ ಶಾಸಕರಿಗೆ – ಎಸ್.ಐ.ಓ ಇಳಕಲ್ ನಿಯೋಗ ಭೇಟಿ.
ಇಲಕಲ್ಲ ಫೆ.25

2023-24 ರಲ್ಲಿ ಸ್ಥಾಪಿಸಲಾದ ರಾಜ್ಯದ ಹೊಸ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಮುಚ್ಚುವ ಚಿಂತನೆಯಲ್ಲಿದ್ದು, ಅದರಲ್ಲಿ ಬಾಗಲಕೋಟೆ ವಿ.ವಿಯು ಒಂದಾಗಿದೆ. ಸರಿ ಸುಮಾರು 73 ಸಂಯೋಜಿತ ಕಾಲೇಜುಗಳನ್ನು ಮತ್ತು ಅಂದಾಜು 30 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ವಿಶ್ವವಿದ್ಯಾಲಯ ವನ್ನು ಬಂದ್ ಮಾಡದೆ, ಅಲ್ಲಿನ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಿ, ವಿವಿಯನ್ನು ಸದೃಢ ಗೊಳಿಸಲು ಅಗತ್ಯ ಅನುದಾನವನ್ನು ನೀಡಬೇಕು. ಇದರೊಂದಿಗೆ 2014-15 ರ ರಾಜ್ಯ ವಾರ್ಷಿಕ ಬಜೆಟ್ ನಲ್ಲಿ ಘೋಷಣೆಯಾದ ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಅಗತ್ಯ ಅನುದಾನ ನೀಡಬೇಕು ಮತ್ತು ತಕ್ಷಣವೇ ವೈದ್ಯಕೀಯ ಕಾಲೇಜನ್ನು ಕಾರ್ಯಾರಂಭ ಮಾಡಬೇಕೆಂದು.

ಹುನಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರು ಅವರಿಗೆ ಇಳಕಲ್ ನಗರದ ಶಾಸಕರ ಗೃಹ ಕಚೇರಿಯಲ್ಲಿ ಸ್ಟೂಡೆಂಟ್ ಇಸ್ಲಾಮೀಕ ಆರ್ಗನೈಜೆಷನ್ ಆಫ ಇಂಡಿಯಾ (SIO) ಇಳಕಲ್ಲ ನಿಯೋಗವು ಭೇಟಿ ನೀಡಿ, ಈ ಎರಡು ಶೈಕ್ಷಣಿಕ ಸಂಬಂಧಿ ವಿಷಯಗಳ ಕುರಿತು ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತಿ, ಜಿಲ್ಲೆಯ ಜನರ ಬೇಡಿಕೆಯನ್ನು ಸಾಕಾರ ಗೊಳಿಸಲು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರಿಗೆ ಒತ್ತಾಯ ಮಾಡಬೇಕೆಂದು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾಧ್ಯಕ್ಷ, ಮೊಹಮ್ಮದ್ ಪೀರ್ ಲಟಗೇರಿ, ಸ್ಥಾನೀಯ ಅಧ್ಯಕ್ಷರಾದ ಆಸಿಫ್ ಹುಣಚಗಿ ಹಾಗೂ ಕಾರ್ಯದರ್ಶಿ ಉಸ್ಮಾನ್ ಗನಿ ಶಿವನಗುತ್ತಿ ಮತ್ತು ನಹೀಮ್ ರಾಂಪುರ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಅಬ್ದುಲ್.ಗಫಾರ್.ತಹಶೀಲ್ದಾರ.ಇಲಕಲ್ಲ. ಬಾಗಲಕೋಟ