ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ – ಸ್ವಾಗತ ಸಮಾರಂಭ.
ಬೇವೂರು ಸ.06





ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡಿಸಿ ಕೊಳ್ಳಬೇಕು. ಕಾಯಕಗಳಲ್ಲಿ ತೊಡಗಿ ಸ್ವಾವಲಂಬಿಗಳಾಗ ಬೇಕು ಎಂದು ಮುದ್ದೇಬಿಹಾಳದ ಕಲಾವಿದ ರಾಜೂ ಲೇಬಗೇರಿ ಹೇಳಿದರು. ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದಲ್ಲಿ ಜರುಗಿದ ವಿವಿಧ ಚಟುವಟಿಕೆಗಳ ಉದ್ಘಾಟನೆ ಬಿ.ಎ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅತಿಥಿಯಾಗಿ ಭಾಗಿಯಾಗಿ ಅವರು ಮಾತಾನಾಡಿದರು. ಅಧ್ಯಕ್ಷತೆ ವಹಿಸಿ ಮಾತಾನಾಡಿದ ಪ್ರಾಚಾರ್ಯ ಜಗದೀಶ ಗು.ಭೈರಮಟ್ಟಿ ವಿದ್ಯಾರ್ಥಿಗಳು ಶಿಕ್ಷಣವನ್ನು ಉತ್ಸಾಹ, ಶ್ರದ್ದೆಯಿಂದ ಕಲಿತು ವಿವಿಧ ರಂಗಗಳಲ್ಲಿ ಸಾಧಕರಾಗಿ ಬೆಳೆದು ಸಮಾಜದ ಆಸ್ತಿಯಾಗಿ ಬೆಳೆಯ ಬೇಕು ಎಂದು ಹೇಳಿದರು. ಸಮಾರಂಭದಲ್ಲಿ ವಿಶ್ರಾಂತ ಪ್ರಾಚಾರ್ಯ ಬಿ.ಬಿ ಬೇವೂರ. ಉಪನ್ಯಾಸಕರಾದ ಎಸ್.ಎಸ್ ಆದಾಪೂರ ಭಾಗಿಯಾಗಿದ್ದರು. ವಿದ್ಯಾರ್ಥಿನಿ ಬಿಂದು ಡೋಣಿ ನಿರೂಪಿಸಿದರು. ವಿಜಯಲಕ್ಷ್ಮೀ ಬಂಡಿವಡ್ಡರ ಸಂಗಡಿಗರು ಪ್ರಾರ್ಥಿಸಿದರು. ಹಣಮಂತ ಪೂಜಾರಿ ವಂದಿಸಿದರು. ಡಾ, ಸಂಗಮೇಶ ಹಂಚಿನಾಳ, ಎನ್.ಎಸ್.ಎಸ್ ಅಧಿಕಾರಿ ಜಿ.ಎಸ್ ಗೌಡರ, ಡಿ.ವಾಯ್. ಬುಡ್ಡಿಯವರ, ಡಾ, ಎ.ಎಮ್ ಗೊರಚಿಕ್ಕನವರ. ಮುಂತಾದವರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಲಾಯಿತು.
ವರದಿ:ಅಮರೇಶ ಮ.ಗೊರಚಿಕ್ಕನವರ.
ಕೂಡಲಸಂಗಮ