ಶೌಚಾಲಯ ಬಳಕೆ ಕುಟುಂಬದ ಗೌರವ – ಹೆಚ್ಚಿಸಿರು.
ಹೊನ್ನಾಕಟ್ಟಿ ನ.21

ಬಾಗಲಕೋಟ ತಾಲೂಕಿನ ಹೊನ್ನಾಕಟ್ಟಿಯ ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ದಿನ ಬಾಲ್ಯ ವಿವಾಹ ತಡೆ, ಭ್ರೂಣ ಹತ್ಯ ತಡೆ ಕಾನೂನು ಅರಿವು ಬಗ್ಗೆ ಗ್ರಾಮ ಆರೋಗ್ಯ ನೈರ್ಮಲ್ಯ ಸಮೀತಿ ಸಭೆ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಎಸ್.ಎಚ್ ಬೀರಣ್ಣವರ ವಹಿಸಿದ್ದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಸ್ವಚ್ಛಭಾರತ ಅಭಿಯಾನದ ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮ ಮಾಡಲು ಎಲ್ಲರೂ ಶೌಚಾಲಯ ಉಪಯೋಗಿಸಿ ರೋಗ ಮುಕ್ತ ಗ್ರಾಮಕ್ಕಾಗಿ ಕೈಜೋಡಿಸಿರಿ. ಬಾಲ್ಯ ವಿವಾಹ ಕಾನೂನು ಬಾಹಿರ ಶಿಕ್ಷಾರ್ಹವಾಗಿದೆ. ಬಾಲ್ಯ ವಿವಾಹ ಮಾಡಬಾರದು ಹೆಣ್ಣು ಮಕ್ಕಳನ್ನು ಶಿಕ್ಷಣ ವಂತಳಾಗಿ ಮಾಡಿ ಲಿಂಗ ತಾರತಮ್ಯ ಮಾಡಬಾರದು, ಹಾಗೂ ವಿವಿಧ ಸಾಂಕ್ರಾಮುಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಉತ್ತಮ ಆರೋಗ್ಯವನ್ನು ಸಂಪಾದಿಸಿ ನಮ್ಮ ಆರೋಗ್ಮ ನಮ್ಮ ಕೈಯಲ್ಲಿ ವಯಕ್ತಿಕ ಸ್ವಚ್ಛತೆ, ಸುತ್ತ ಮುತ್ತ ಪರಿಸರ ಸ್ವಚ್ಛತೆ, ಶುದ್ಧ ನೀರು ಸೇವಿಸಿ.”ಆರೋಗ್ಯವಂತ ತಾಯಿಗೆ ಆರೋಗ್ಯವಂತ ಮಗು ಜನನ. ರಕ್ತ ಹೀನತೆಯಿರುವ ಗರ್ಭಿಣಿಯರು ಆರೋಗ್ಯ ಇಲಾಖೆಯಿಂದ ವಿತರಿಸುವ ಕಬ್ಬಿಣಾಂಶ ಮಾತ್ರೆ ತಪ್ಪದೇ ಸೇವಿಸಿರಿ. ಕಾಯಿಪಲ್ಲೆ, ತರಕಾರಿ, ಪೋಷಕಾಂಶಯುಕ್ತ ಆಹಾರ ಸೇವಿಸಿರಿ.

ಹುಟ್ಟಿನಿಂದ 5 ವರ್ಷದ ವಯೋಮಾನ ಮಕ್ಕಳಲ್ಲಿ ಮಾರಕ ರೋಗಗಳ ತಡೆಗೆ ಸಮಯಕ್ಕನಸಾರ ಎಲ್ಲ ಲಸಿಕೆಗಳನ್ನು ತಪ್ಪದೇ ಮಕ್ಕಳಿಗೆ ಹಾಕಿಸಿ ಯಾವುದೇ ತರಹ ಆರೋಗ್ಯ ಸಮಸ್ಯೆಗಳಿಗೆ 104 ಕರೆ ಮಾಡಿ ಸೂಕ್ತ ಸಲಹೆ ಪಡೆಯಿರಿ ಎಂದರು. ಶಾಲಾ ಮುಖ್ಯ ಶಿಕ್ಷಕರಾದ ಎಸ್ ಎಚ್ ಬೀರಣ್ಣವರ್ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ ಸರಕಾರ ಸೌಲಭ್ಯಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಕು. ಹೆಣ್ಣು ಮಕ್ಕಳನ್ನು ಓದಿಸಿರಿ ಹೆಣ್ಣು ಮಗು ಜಗದ ಕಣ್ಣು ಎಂದರು. ಗ್ರಾಮ ಆರೋಗ್ಯ ನೈರ್ಮಲ್ಯ ಸಮೀತಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆ ಸುಜಾತಾ ಎಸ್ ನೆಲವಡೆ ಆಶಾ ಕಾರ್ಯಕರ್ತೆ ಪದ್ಮಾ ಬಂಡಿವಡ್ಡರ ಗ್ರಾಮದ ಅಂಬವ್ವ ಸಂಜೀವಪ್ಪ ಗೌಡರ, ಬಸವ್ವ ಬೊಮ್ಮಣ್ಣ ಹುಗ್ಗಿ,ಭಾಗೀರಥಿ ಸೂರ್ಯವಂಶಿ, ರೇಣುಕಾ ಬೀಳಗಿ, ಪಾರವ್ವ ಬಿಲಕೇರಿ, ಭಾರತಿ ಗುಳೇದಗುಡ್ಡ, ಮಾಲಾ ಅನವಾಲ್, ಯಮನವ್ವ ಗೌಡರ್, ಪಪಾರ್ವತಿ ನರಸಪ್ಪನವರ, ಸೀತವ್ವ ಮಾದರ, ಶ್ರೀದೇವಿ ಬಿಲ್ ಕೇರಿ,ಮಾಲಾ ಸೂರ್ಯವಂಶಿ, ಗರ್ಭಿಣಿಯರು ತಾಯಿಂದಿರು ಮುದ್ದುಮಕ್ಕಳು ಭಾಗವಹಿಸಿದ್ದರು.