ಸಾರಿಗೆ ಬಸ್ ಮಾರ್ಗ ಬದಲಾವಣೆಯನ್ನು ಖಂಡಿಸಿ – ಜ.18 ರಂದು ಧರಣಿ.
ರೋಣ ಜ.17

ಬಸ್ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದ ರೋಣ ಸಾರಿಗೆ ಘಟಕ ವ್ಯವಸ್ಥಾಪಕ ಎಂ.ಎಂ ಯಕಂಬಾ ವರ್ತನೆ ಖಂಡಿಸಿ ತಾಲೂಕಿನ ಗುಜಮಾಗಡಿ ಗ್ರಾಮದ ಪ್ರಶಾಂತ ನಗರ ಪ್ರಯಾಣಿಕರು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಜ.18 ರಂದು ಅನಿರ್ದಿಷ್ಟಾವದಿ ವರೆಗೆ ಗುಜಮಾಗಡಿ ಗ್ರಾಮದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳಿಂದ ರೋಣದಿಂದ ಅಬ್ಬಿಗೇರಿ, ಗುಜಮಾಗಡಿ, ಕಿರಟಗೇರಿ, ಕುರಡಗಿ, ಹುಯಿಲಗೋಳ ಮಾರ್ಗವಾಗಿ ಸಂಚರಿಸುತ್ತಿವೆ. ಇದರಿಂದ ಗುಜಮಾಗಡಿ ಪ್ರಶಾಂತ ನಗರಕ್ಕೆ ಬಸ್ ಸಂಚಾರ ಸ್ಥಗಿತವಾಗಿದೆ. ಅಲ್ಲದೇ ಗದಗಗೆ ತೆರಳುವ ಗುಜಮಾಗಡಿ ಗ್ರಾಮದ ಶಾಲಾ, ಕಾಲೇಜು ವಿದ್ಯಾ ರ್ಥಿ, ಪ್ರಯಾಣಿಕರಿಗೆ ಸುತ್ತುವರೆದು ಪ್ರಯಾಣಿಸ ಬೇಕಾದ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಗುಜಮಾಗಡಿ ಪ್ರಶಾಂತ ನಗರ ಪ್ರಯಾಣಿಕರಿಗೆ, ಶಾಲಾ, ಕಾಲೇಜ್ ವಿದ್ಯಾ ರ್ಥಿಗಳಿಗೆ ತೊಂದರೆ ಯಾಗದಂತೆ ಈ ಮೊದಲು ಯಾವ ರೂಟ್ ನಲ್ಲಿ ಬಸ್ ಸಂಚರಿಸುತ್ತಿದ್ದವೋ ಅದೇ ಮಾರ್ಗವಾಗಿ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳಿಗೆ ಆಗ್ರಹಿಸಿ ಜ.18 ರಿಂದ ಗುಜಮಾಗಡಿ ಬಸ್ ತಂಗುದಾಣ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಗುಜಮಾಗಡಿ ಗ್ರಾಮದ ಪ್ರಶಾಂತ ನಗರ ನಿವಾಸಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ. ಗದಗ