ಕಂದಗಲ್ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲರ – ವಿಶೇಷ ಗ್ರಾಮ ಸಭೆ.
ಕಂದಗಲ್ಲ ಜ.19

ಇಳಕಲ್ ತಾಲೂಕಿನ ಕಂದಗಲ್ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ವಿಶೇಷ ಗ್ರಾಮ ಸಭೆ ಅಧ್ಯಕ್ಷತೆಯಲ್ಲಿ ಬಸವರಾಜ ಹಳ್ಳಳ್ಳಿ ಜ್ಯೋತಿ ಬೆಳಗಿಸುವ ಮೂಲಕಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಶನಿವಾರ ನಡೆಯಿತು. ಹುನಗುಂದು ಮತ್ತು ಇಳಕಲ್ ತಾಲೂಕಿನ ಎಂ.ಆರ್.ಡಬ್ಲ್ಯೂ ಬೀರಗುಂಡ ಅವರು 21 ಬಗೆಯ ವಿಕಲತೆ ಹಾಗೂ ಯು.ಡಿ.ಐ.ಡಿ ಕಾರ್ಡ್, ಶಿಶು ಪಾಲನಾ ಭತ್ಯೆ ಹಾಗೂ ವಿವಾಹ ಪ್ರೋತ್ಸಾಹ ಧನ ಸಹಿತ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಮಾನಸಿಕ ಆರೋಗ್ಯ ಹಾಗೂ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಕುರಿತು ಅವರು ಮಾಹಿತಿ ನೀಡಿದರು. ಮಾನಸಿಕ ಆರೋಗ್ಯ ಕುರಿತು ಮಾತನಾಡಿದರು. ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ವಿಶೇಷ ಚೇತನರ ಪ್ರಯುಕ್ತ ಶನಿವಾರ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಸಮನ್ವಯ ಗ್ರಾಮ ಸಭೆ ನಡೆಯಿತು.ಸಭೆಯಲ್ಲಿ ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿ, ಅಂಗವಿಕಲರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಲಾಯಿತು, ಹೀರ್ ಓತಗೇರಿ ವಿ.ಆರ್.ಡಬ್ಲ್ಯೂ ಸತ್ಯಪ್ಪ ವಾಲಿಕಾರ್ ಸೌಲಭ್ಯದ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಹಳ್ಳಳ್ಳಿ ಅಂಗವಿಕಲರ ಸೇವೆ ಸಾಕ್ಷಾತ ಪರಮಾತ್ಮನ ಸೇವೆ ಮಾಡಿದಂಗ ಎಂದು ತಿಳಿಸಿದರು.

ವಿಕಲ ಚೇತನರ ಜೊತೆ ನಾನು ಕೈಜೋಡಿಸಿ ನಮ್ಮ ಗ್ರಾಮ ಪಂಚಾಯತಿಯ ಫೈ ಪರ್ಶಂಟ್ ಅನುದಾನ ಅವರಿಗೆ ಮೀಸಲಿಟ್ಟ ಹಣವನ್ನು ಸಾಮಗ್ರಿಗಳನ್ನು ಖರೀದಿ ಮಾಡಿ ಅವರಿಗೆ ತಲುಪಿಸುತ್ತೇವೆ ಎಂದು ಮಾತನಾಡಿದರು, ಅಂಗವಿಕಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಕನಿಕರದಿಂದ ನೋಡುವ ಬದಲು ಗೌರವ ಮತ್ತು ಸಮಾನತೆ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಜನ ಪ್ರತಿನಿಧಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಂಗವಿಕಲರಿಗೆ ಸುಲಭವಾಗಿ ಎಟುಕುವಂತೆ ಕೆಲಸ ಮಾಡಬೇಕು ಎಂದು ಹೇಳಿದರು. ಸರ್ಕಾರದಿಂದ ಅಂಗವಿಕಲರಿಗೆ ಸ್ವಾವಲಂಬಿ ಗಳಾಗಿ ಬದುಕಲು ಸಾಕಷ್ಟು ಯೋಜನೆಗಳಿವೆ. ಎಲ್ಲರೂ ಅಂತಹ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು, ಅವುಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ರೈಮಾನ್ ಸಾಬ್ ಭಗವಾನ್ ಹೇಳಿದರು. ಗ್ರಾಮ ಪಂಚಾಯತಿ ಸದಸ್ಯ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುಪುತ್ರಪ್ಪ ಕತ್ತಿ, ಸದಸ್ಯರಾದ ತಿಮ್ಮರೆಡ್ಡಿ ಗೌಂಡಿ ನಂದವಾಡಗಿ, ಎಂ.ಆರ್.ಡಬ್ಲ್ಯೂ ಹಿರೇ ಕೊಡಗಲಿ ಪರಸಪ್ಪ ನಾಯಕ್ ವಿ.ಆರ್.ಡಬ್ಲ್ಯೂ ಕಂದಗಲ್ ಗ್ರಾಮ ಪಂಚಾಯತಿ ರಿಯಾ ವಿ.ಆರ್.ಡಬ್ಲ್ಯೂ ಗಿರಿಯಪ್ಪ ಜವಾನರ್ ಭಾಗ್ಯ ಬೆನಕಟ್ಟಿ ಎಲ್ಲಾ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಗ್ರಂಥಾಲಯ ಸಿಬ್ಬಂದಿಯವರು ಊರಿನ ಹಿರಿಯರು ಮತ್ತು ಪತ್ರಕರ್ತರು, ಮತ್ತಿತರರು ಇದ್ದರು ರಮೇಶ ದಾಸರ ಸ್ವಾಗತಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ