“ಮನುಸ್ಮೃತಿಯ ದಹನಕ್ಕೆ 97 ವರ್ಷ್”…..

ಭಾರತೀಯ ಪರಂಪರೆಯಲ್ಲಿ ಕೆಡುಕನ್ನು ಸುಟ್ಟು ಒಳಿತನ್ನು ಸ್ವಾಗತಿಸುವ ಜಾಗತಿಕ ಹಬ್ಬವೆಂದರೆ ಹೋಳಿ ಹಬ್ಬ 1905 ರ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ವಿದೇಶಿ ವಸ್ತುಗಳನ್ನು ಸುಡುವುವ ಆಂದೋಲನ ದೊಂದಿಗೆ ನಡೆದ ಚಳುವಳಿಯ ತಿರುವಿ ನೊಂದಿಗೆ 25/12/1927 (97) ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರರು ಮನಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕುವ ಮೂಲಕ ಪ್ರಜಾಸಾತ್ತಾತ್ಮಕ ಸಂವಿಧಾನ ಆಗಮನಕ್ಕೆ ಮುನ್ನುಡಿ ಬರೆದ ಆಧುನಿಕ ಮನು ಆಗಿದ್ದಾರೆ. ಸ್ವಾತಂತ್ರ್ಯ ಹೋರಾಟದ ಅರ್ಥ ಪರಿಪೂರ್ಣತೆಗೆ ಬಾಬಾ ಸಾಹೇಬರ ಈ ನಿರ್ಣಾಯವೇ ಕಾರಣವಾಗಿದೆ. ಗಾಂಧಿಯವರು ವಿದೇಶಿ ವಸ್ತುಗಳನ್ನು ಸುಡುತ್ತಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬರು ಸ್ವದೇಸಿ ಗುಲಾಮಿ ಚಿಂತನೆಗಳನ್ನು ಹೊಂದಿದ್ದ ಮನುಸ್ಮೃತಿಯನ್ನು ಸುಡಲು ಮುಂದಾದರೂ ಬ್ರಿಟಿಷರ ಕಾಲದ ಭಾರತದಲ್ಲಿ ವಿಲಿಯಂ ಜೋನ್ಸ ಎಂಬ ಅಧಿಕಾರಿ 1794 ರಲ್ಲಿ ಮನುಸ್ಮೃತಿಯನ್ನು ಇಂಗ್ಲೀಷಗೆ ಭಾಷಾoತರಿಸಿ ವಸಾಹತು ಹಿಂದೂ ಕಾನೂನಾಗಿ ಪರಿವರ್ತನೆ ಮಾಡಿ 1250 ಬಿ, ಸಿ ಮತ್ತು 1000 ಬಿ, ಸಿ ಎಂದು ಗುರುತಿಸಿ ಮನುಸ್ಮೃತಿಯ ಅಡಿಯಲ್ಲಿ ನೀ ಮುಟ್ಟಬೇಡ, ನಾ ಪವಿತ್ರ, ನೀನು ಹೊಲಸು, ನಾನು ಪುಣ್ಯವಂತ, ಧರ್ಮ ಜಾತಿ ಆಚಾರ ವಿಚಾರ ಸರ್ವೋತ್ತಮ, ಅನಾಗರಿಕ ಅಪವಿತ್ರ ಎನ್ನುವುದಾಗಿ ಮಾಡಿ ಫ್ಯಾಸಿಸಂ ಮತ್ತು ಮನುವಾದ ಎಂಬುವದು ಒಂದು ನಾಣ್ಯದ ಮುಖವಾಗಿತ್ತು ತಾನೇ ಶ್ರೇಷ್ಠ ಎನ್ನುವವನು ಎಂದಿಗೂ ಇನ್ನೊಬ್ಬರ ಶ್ರೇಷ್ಠತೆ ಬಯಸಲಾರ ಆರ್ಯರು, ವೈದಿಕರು ಈ ಧೋರಣೆ ಹೊಂದಿದವರಾದ್ದರು ಹೆಜ್ಜೆ ಹೆಜ್ಜೆಗೂ ಶೂದ್ರರನ್ನು ಉಪಾಯದಿಂದ ಧರ್ಮ ಜಾತಿ ದೇವರುಗಳ ಹೆಸರಲ್ಲಿ ತುಳಿಯುತ್ತಾ ಬಂದಿರುವುದು ತಮ್ಮ ಕಳಪೆ ಶ್ರೇಷ್ಠತೆ ಉಳಿಸಿ ಕೊಳ್ಳಲು ಶಾಸ್ತ್ರ ಗ್ರಂಥವನ್ನು ಹುಟ್ಟು ಹಾಕಿ ಕಾಲ ಕಾಲಕ್ಕೆ ತಿದ್ದುಪಡಿ ತಂದು ತಮ್ಮ ಸುತ್ತಲೂ ಭದ್ರ ಬೇಲಿ ಹಾಕಿಕೊಂಡ ಮನುಸ್ಮೃತಿಯಂತ ಕಳಪೆ ಮನುವಾದವನ್ನು ಅಂಬೇಡ್ಕರ್ 25/12/1927 ರಂದು ಮನುಸ್ಮೃತಿಯ ಗ್ರಂಥವನ್ನು ಬಹಿರಂಗವಾಗಿ ಸುಟ್ಟುಹಾಕಿ ಶೋಷಿತ ಶೂದ್ರರಿಗೆ ಬಿಡುಗಡೆಯ ತೋರಿಸಿದ ಅಧಿಪುರುಷ ಡಾ, ಬಾಬಾ ಸಾಹೇಬ್ ಅಂಬೇಡ್ಕರ್.
ವಿಶೇಷ ಲೇಖನ
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ