ವೇಮನ ಆದರ್ಶಗಳು ಸಮಾಜಕ್ಕೆ ದಾರಿ ದೀಪ – ಎಸ್.ವಿ ಪಾಟೀಲ್.
ಗೊರಬಾಳ ಜ.20

ಇಳಕಲ್ ಇಲ್ಲಿಗೆ ಸಮೀಪದ ಗೊರಬಾಳ ಗ್ರಾಮದಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮದ ರಡ್ಡಿ ಸಮಾಜ ಗುರು ಹಿರಿಯರು ಹಾಗೂ ಯುವಕ ಮಿತ್ರರು ಜಯಂತಿ ಆಚರಣೆ ಮಾಡಿದರು. ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತಿ ಪ್ರೊಫೆಸರ್ ಶ್ರೀ ಎಸ್.ವಿ ಪಾಟೀಲ್ ಮಾತನಾಡಿದುಶ್ಚಟದ ದಾಸನಾಗಿ ಪರಸ್ತ್ರಿಯರ ವ್ಯಾಮೋಹಕ್ಕೆ ಒಳಗಾಗಿ ತನ್ನ ತನವನ್ನು ಕಳೆದು ಕೊಂಡಿದ್ದ ವೇಮನನ್ನು ಅತ್ತೆಗೆ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿ, ಒಂದು ಸನ್ನಿವೇಶದ ಮೂಲಕ ದುಶ್ಚಟದ ದಾಸನಾಗಿದ್ದ ವೇಮನನ್ನು ಮಹಾ ಯೋಗಿಯನ್ನಾಗಿ ಮಾಡಿದಳು.

ಅಂದಿನಿಂದ ವೇಮನ ಲೌಕಿಕ ಜೀವನವನ್ನು ಮರೆತು ಆಧ್ಯಾತ್ಮ ಮತ್ತು ಧಾರ್ಮಿಕತೆಯನ್ನು ಮೈಗೂಡಿಸಿ ಕೊಂಡು ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡುತ್ತಾ ಇಡೀ ಸಮಾಜವನ್ನು ಪರಿವರ್ತನೆ ಮಾಡಿದಂತಹ ಮಹಾಯೋಗಿ ವೇಮನ ಜನಿಸಿದ ಸಮಾಜದಲ್ಲಿ ನಾವೆಲ್ಲರೂ ಜನಿಸಿದ್ದು ನಮ್ಮ ಭಾಗ್ಯ ಎಂದು ಹೇಳಿದರು.ವೇದಿಕೆ ಮೇಲೆ ಹಿರಿಯರಾದ ರಾಮನಗೌಡ ಕವಡಿಮಟ್ಟಿ ಡಾ, ಸಂಗಮೇಶ್ ಪಾಟೀಲ್. ಬಸವರಾಜ ಪಾಟೀಲ್. ಅಕ್ಯಪ್ಪಗೌಡ ಗೌಡರ. ಇದ್ದರು ಹಾಗೂ ಗ್ರಾಮದ ಎಲ್ಲಾ ಹಿರಿಯರು ಯುವಕ ಮಿತ್ರರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ಆಚರಣೆ ಮಾಡಿದರು.