ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕಿನ – ನೂತನ ಪದಾಧಿಕಾರಿಗಳ ನೇಮಕ.
ಯಡ್ರಾಮಿ ಜ.21
ಕರ್ನಾಟಕ ರೈತ ಸಂಘ ಮತ್ತು ಹಾಗೂ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ಶರಣಪ್ಪ ದೊಡ್ಡಮನಿ ರವರ ನೇತೃತ್ವದ (ಬಣ) ಸಂಘಟನೆಯು ಕಲಬುರಗಿಯ ಜಿಲ್ಲಾಧ್ಯಕ್ಷರಾದ ಸಾಯಿಬಣ್ಣ ಪೂಜಾರಿ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕಿನ ನೂತನ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದರು. ಯಡ್ರಾಮಿ ತಾಲೂಕಿನ ನೂತನ ಅಧ್ಯಕ್ಷರಾಗಿ ರಫೀಕ್ ಮೂದಿನ ಸಾಬ ಯಡ್ರಾಮಿ, ಗೌರವಾಧ್ಯಕ್ಷರಾಗಿ ಗೊಲ್ಲಾಳಪ್ಪ ಬಿ ಯಂಕಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಈರಣ್ಣ ಬಿ ತಳವಾರ್, ಸಹ ಕಾರ್ಯದರ್ಶಿಯಾಗಿ ಅಮೀರ ಸಾಬ ಎಸ್ ಭಾಗವಾನ್ , ಸಂಘಟನಾ ಕಾರ್ಯದರ್ಶಿಯಾಗಿ ಸೈದಪ್ಪ ಜಿ ತಳವಾರ್, ಸದಸ್ಯರಾಗಿ ಮಲ್ಲಿಕಾರ್ಜುನ್ ಕುಕುನೂರ್, ಮತ್ತು ದೇವೇಂದ್ರ ಎಸ್ ಮುತ್ತಕೋಡ ರವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದರು. ಇನ್ನೂ ಕಾರ್ಯಕ್ರಮ ಉದ್ದೇಶ ಮಾತನಾಡಿದ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಸಾಯಿಬಣ್ಣ ಪೂಜಾರಿ ರವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ತಮ್ಮಎಲ್ಲರಿಗೂ ಅಭಿನಂದನೆಗಳು ನಮ್ಮ ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದೀರಿ ಎಂಬ ವಿಶ್ವಾಸದೊಂದಿಗೆ ನೂತನ ಯಡ್ರಾಮಿ ತಾಲೂಕಿನಲ್ಲಿ ರೈತರ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿ ಧ್ವನಿ ಎತ್ತಿ ಅವರಿಗೆ ನ್ಯಾಯ ಒದಗಿಸುವವರೆಗೂ ಉಗ್ರವಾದ ಹೋರಾಟ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸುತ್ತಾ ಮತ್ತು ಕಾರ್ಯ ಚಟವಟಿಕೆಗಳ ಬಗ್ಗೆ ಚಿಂತಿಸಿ ಆಲಿಸಿ ರೈತರ ಕಷ್ಟಕ್ಕೆ ನಷ್ಟಕ್ಕೆ ಬೆನ್ನೆಲುಬಾಗಿ ನಿಂತು ತಮ್ಮ ಕಾರ್ಯಗಳನ್ನು ಚುರುಕುವಹಿಸಿ ನಿರ್ವಹಿಸುತ್ತಾರೆ, ರೈತರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಆತ್ಮೀಯತೆಯ ವಿಶ್ವಾಸದಿಂದ ತಮ್ಮನ್ನೆಲ್ಲ ನೂತನ ಪದಾಧಿಕಾರಿಗಳಾಗಿ ನೇಮಕ ಮಾಡಿ ಆದೇಶವಿಸಿದ್ದು ಖುಷಿಕರ ವಿಷಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ಎನ್.ನೀಲಕೋಡ.ಇಜೇರಿ