ಹರಿಹರದ ತಪೋವನಕ್ಕೆ ಚಲೋ – ಡಿ.ಎಸ್ಎಸ್ ಕರೆ.
ಬಾಗಲಕೋಟೆ ಜ .22
ದೇಶದ ಶೋಷಿತರ ಧ್ವನಿ ಭಾರತ ರತ್ನ ಡಾ, ಬಿ.ಆರ್ ಅಂಬೇಡ್ಕರ್ ಹಾಗೂ ಕರ್ನಾಟಕ ದಲಿತ ಸೂರ್ಯ ಮಹಾತ್ಮ ಪ್ರೊ, ಬಿ .ಕೃಷ್ಣಪ್ಪ ನವರು ಕಟ್ಟಿ ಬೆಳೆಸಿದ ದಲಿತರ ಎಳ್ಗೆಯ ಹೋರಾಟದ ವಿಮೋಚನಾ ರಥವನ್ನು ಸಂಘಟನಾತ್ಮಕವಾಗಿ ಮುನ್ನಡೆಸಲು ಹಾಗೂ ದಲಿತ ಸೂರ್ಯ ಕೃಷ್ಣಪ್ಪ ನವರು ಕಂಡ ಕನಸಿನ ಹಾದಿಯನ್ನು ಸಾಕಾರ ಗೊಳಿಸಲು ರಾಜ್ಯದ್ಯಾoತ ಸೋಷಿತರ ಒಳ ಮೀಸಲಾತಿ ಜಾರಿಗಾಗಿ ಸರ್ಕಾರದ ನಿರ್ಣಯದ ವಿಚಾರ ಹಾಗೂ ದಲಿತರ ರಾಜಕೀಯ ಅರಿವು ನೆರವಿನ ಕಾರ್ಯಗಾರಕ್ಕೆ ಕರೆ ಕೊಟ್ಟು ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿಯವರು ಮಾತನಾಡಿ ಇದೆ ಡಿಸೇಂಬರ್ 25,26 ಹರಿಹರದ ತಪೋವನದಲ್ಲಿ ನಡೆಯುವ ಎರಡು ದಿನಗಳ ಕಾಲ ನಡೆಯುವ ದಲಿತರ ಒಳ ಮೀಸಲಾತಿ ಜಾರಿ, ಮನೆ ನಿವೇಶನ, ಬಗರ್ ಹುಕುಂ ಸಕ್ರo ಪರಬಾರೆ ಕೇಸುಗಳ ಶೀಘ್ರ ವಿಲೇವಾರಿ, ಭೂಮಿ ಹೋರಾಟ, ದಲಿತರ ಮೇಲಿನ ದೌರ್ಜನ್ಯ ತಡೆಯಲು, ಜಾತಿ ಪದ್ಧತಿ ಮೇಲು ಕೀಳು ಪದ್ಧತಿ ಹೋಗಲಾಡಿಸಲು ನಿರುದ್ಯೋಗ ಸಮಸ್ಯೆ ಬಗೆಹರಿಸಲು ದಲಿತರ ರಾಜಕೀಯ ಅರಿವು ನೆರವು, ಮ್ಯಾನುಯಲ್ ಸ್ಕೈವೆಂಜಾರ್ಸ, ಸಫಾಯಿ ಕರ್ಮಚಾರಿಗಳ ಪುನರವಸತಿ, ಪೌರಾ ಕಾರ್ಮಿಕರ ಸಮಸ್ಯೆಗಳು, ನೌಕರಿ ನೇಮಕಾತಿಗಳ ಕುರಿತು ಸ್ವಾಭಿಮಾನಿ ಸಂಘಟನೆಯ ಅನೇಕ ದಲಿತ ಮುಖಂಡರು ಅಭಿಮಾನಿಗಳು ಬಾಗಲಕೋಟೆ ಜಿಲ್ಲೆಯಿಂದ ಹರಿಹರದ ತಪೋವನಕ್ಕೆ ತೆರಳುವದಾಗಿ ತಿಳಿಸಿದರಲ್ಲದೆ ಪ್ರೊ, ಬಿ.ಕೃಷ್ಣಪ್ಪ ನವರ ಸ್ಥಾಪಿತ ಸಂಘಟನೆಯು ರಾಜ್ಯದಲ್ಲಿ ದಲಿತರ ಶೋಷಿತರ ಏಳ್ಗೆಗಾಗಿ ಶ್ರಮಿಸುತ್ತಿದ್ದೂ ಸಂಘಟನೆಯ ಹೋರಾಟದ ಹಾದಿಯನ್ನು ಶುಭದ್ರವಾಗಿ ನಾವೆಲ್ಲರೂ ಕಟ್ಟೋಣ ಕಾರ್ಯಗಾರದಲ್ಲಿ ಪಾಲ್ಗೊಳ್ಳೋಣ ಎಂದರು. ಪತ್ರಿಕಾ ಗೋಷ್ಟಿಯಲ್ಲಿ ಬೆಳಗಾವಿ ವಿಭಾಗೀಯ ಸಂಚಾಲಕರು ಹಣಮಂತ.ಎಚ್ ಹೀರೆಮನಿ, ಬಾಗಲಕೋಟೆ ಜಿಲ್ಲಾ ಸಂಚಾಲಕರು ಬಿ.ಯಶೋಧರ ಸಂಗಮ, ಬಾಗವಹಿಸಿದ್ದರೆಂದು ಜಿಲ್ಲಾ ಸಂಘಟನಾ ಸಂಚಾಲಕರು ಯಮನೂರ ಹಲಗಿ ತಿಳಿಸಿದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ.ಶಿರೂರು. ಬಾಗಲಕೋಟೆ