“ಬಾಳ ಪಯಣ ದಾರಿಯಲಿ ಏಳ್ಗೇಗೆ ಎಚ್ಚರವಿರಲಿ”…..

ಎಲ್ಲದಕ್ಕೂ ಅವಲಂಬಿಸದಿರು
ನಿನ್ನ ಜವಾಬ್ದಾರಿ ನೀ ಅರಿ
ಸ್ವಂತ ಬಲದಲಿ ಜೀವನ ಸಾಗಸಿ
ಕಾಯಕದಲಿ ಪ್ರಾಮಾಣಿಕ ನಿಷ್ಠೆ ಇರಸಿ
ಗಳಿಕೆಯ ಉಳಿಕೆಯಲಿ ಅವಶ್ಯಕತೆ
ಇರುವಲ್ಲಿ ಉಪಯೋಗಿಸಿ
ಹಿರಿಯರ ಅನುಭವಿಗಳ ಸ್ನೇಹ ಮಾಡಿ
ಸಮಾಜಮುಖಿ ಪರಿಸರ ಸ್ನೇಹಿಯಾಗಿ
ನಿನ್ನ ಉಸಿರಿಗೆ ಹಸಿರಿರಲಿ
ಜೀವಮಾನದಿ ಒಂದು ಮರ ಬೆಳಸಿ
ಸಕಲ ಜೀವರಾಶಿಗಳೆಲ್ಲರಲಿ
ದಯಾಗುಣವಿರಲಿ
ಬಂಧು ಬಾಂಧವರಲಿ ಅಹಂ ತೋರದಿರಿ
ಬಾಳ ಸಂತೆಯಲಿ ಆಡಂಬರ ಬೇಡ
ನಾ ಎಂಬ ಗರ್ವ ಉತ್ತಮತನದ ವ್ಯಕ್ತಿತ್ವದಿ
ಕಾಣಿ
ಕೀಳು ಭಾವವೇ ಕೆಳಗೆ ತಳ್ಳುವುದು
ವಿನಯ ಸಮಾದಾನವೇ ಶ್ರೇಷ್ಠತೆಯ ಕಿರೀಟ
ಸರಳತೆಯ ಸೂತ್ರ ಪಾಲಿಸಿ
ವಂಶವೃಕ್ಷದಿ ಸಂಸ್ಕಾರ ಸಂಸ್ಕೃತಿ
ಬೆಳಸಿ ಉಳಸಿ
ಸ್ವಾರ್ಥ ಜಗದಲಿ ನಿಸ್ವಾರ್ಥ ಸ್ವಾಭಿಮಾನವಿರಲಿ
ಬೇರೆಯವರ ಬದುಕಿನ ಆದರ್ಶತನ ಮಾತ್ರ
ಅನುಸರಿಸಿ
ಹೊಗಳಿಕೆ ತೆಗಳಿಕೆಗೆ ಹಿಗ್ಗದೇ ಕುಗ್ಗದೇ
ಇದ್ದು ಬೀಡು ನಿನ್ನಿಚ್ಚೆಗೇ ನೀ
ಮನದಲಿ ಸೃಷ್ಟಿ ಕರ್ತನ ಸದಾ ಸ್ಮರಸಿ
ಬಾಳ ಪಯಣ ದಾರಿಯಲಿ
ಏಳ್ಗೇಗೆ ಎಚ್ಚರವಿರಲಿ.
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.