ಚೆಸ್ ಸ್ಪರ್ಧೆಯಲ್ಲಿ – ರಾಷ್ಟ್ರ ಮಟ್ಟಕ್ಕೆ ಆಯ್ಕೆ.
ರೋಣ ಜ.23

ಪಟ್ಟಣದ ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ವೈಭವ ಬಸವರಾಜ ಸಂಗನಬಶೆಟ್ಟರ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿಜಯ ಶಾಲಿಯಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಮುಂದೆ ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕ ವಿದ್ಯಾರ್ಥಿ ವೈಭವ ಬಸವರಾಜ ಸಂಗನಬಶೆಟ್ಟರ ರಾಜ್ಯದಿಂದ ಪ್ರತಿ ನಿಧಿಸುತ್ತಿದ್ದಾನೆ.ರೋಣ ಬಿ.ಇ.ಒ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷರು, ಶರಣರ ಶಿಕ್ಷಣ ಸಮಿತಿ ಸಹಯೋಗ ದೊಂದಿಗೆ ವಿದ್ಯಾರ್ಥಿಗೆ ಸನ್ಮಾನಿಸಿ ರಾಷ್ಟ್ರ ಮಟ್ಟದಲ್ಲಿ ವಿಜಯ ಶಾಲಿಯಾಗಿ ಹೊರ ಹೊಮ್ಮುಲಿ ಎಂದು ಶುಭ ಹಾರೈಸಲಾಯಿತು. ನ್ಯೂ ಲಿಟಲ್ ಫ್ಲವರ್ ಶಾಲೆಯ ಅಧ್ಯಕ್ಷರು, ಸದಸ್ಯರು, ಶರಣರ ಶಿಕ್ಷಣ ಸಮಿತಿ ರೋಣ ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಸಿಬ್ಬಂದಿ, ಪಾಲಕರು, ಸಂತಸ ಪಟ್ಟಿದ್ದಾರೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗೆ ನಾವು ನೀವೆಲ್ಲರು ಸದಾ ಕಾಲ ಪ್ರೋತ್ಸಾಹ ನೀಡೋಣ ಎಂಬುದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆಯ ಅಭಿಮತವಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ