ಉಡಸಲಮ್ಮ ಕೆರೆ ಮತ್ತು ಪಟ್ಟಣದ ಉದ್ಯಾನವನ ಅಭಿವೃದ್ಧಿಗೆ ಭೂಮಿ – ಪೂಜೆ ನೆರೆವೇರಿಸಿದ ಡಾ, ಶ್ರೀನಿವಾಸ್ ಎನ್.ಟಿ.
ಕೂಡ್ಲಿಗಿ ಜ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಶಾಸಕರಾದ ಡಾ, ಶ್ರೀನಿವಾಸ್ ಎನ್.ಟಿ ರವರು ಕೂಡ್ಲಿಗಿ ತಾಲೂಕನ್ನು ಮೂಲಭೂತ ಸೌಕರ್ಯಗಳ ಉತ್ತಮ ಅಭಿವೃದ್ದಿ ಎಲ್ಲಾ ವಿಷಯಗಳಲ್ಲಿ ಮಾದರಿ ತಾಲೂಕನ್ನು ಮಾಡಲು ಮುಂದಾಗಿರುವ ಅಭಿವೃದ್ಧಿಯ ಹರಿಕಾರರು, ಜನಪರ ಕಾಳಜಿ ಹೊಂದಿರುವ ಶಾಸಕರು ಹಾಗೂ ಪ್ರತಿ ಹಳ್ಳಿಗಳ ಶಾಲೆಗಳಿಗೆ ಬೇಕಾಗಿರುವoತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾಗೂ ಪ್ರತಿ ಗ್ರಾಮದ ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಣವನ್ನು ಎಲ್ಲಾ ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಗುಣ ಮಟ್ಟದ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೆ ನೀಡುವುದು ಅವರವರ ಕರ್ತ್ಯವ್ಯ ಎನ್ನುವುದು ಶಾಸಕರ ಉದ್ದೇಶ ಆ ನಿಟ್ಟಿನಲ್ಲಿ ಪ್ರತಿ ಹಳ್ಳಿ ಹಳ್ಳಿಗೆ ಅಭಿವೃದ್ಧಿಗೆ ಕಾರ್ಯಕ್ರಮವನ್ನು ಭೂಮಿ ಪೂಜೆ ಮೂಲಕ ಮಾನ್ಯ ಶಾಸಕರು ಮಾಡುತ್ತಿರುವುದನ್ನು ಕಂಡ ಕೂಡ್ಲಿಗಿ ತಾಲೂಕಿನ ಜನತೆ ಪ್ರತಿ ಹಳ್ಳಿಗಳಲ್ಲಿನ ಜನರು ಅಭಿವೃದ್ಧಿ ವಿಷಯವಾಗಿ ಉತ್ತಮವಾದ ಪ್ರಶಂಸೆ ವ್ಯಕ್ತಪಡಿಸುತ್ತಿರುವುದು ತಿಳಿದು ಬಂದಿದೆ.

ಹಾಗೆ ಕೂಡ್ಲಿಗಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಉಡಿಸಲಮ್ಮ ಕೆರೆ ಅಭಿವೃದ್ಧಿಗೆ 1 ಕೋಟಿ ವೆಚ್ಚ ಹಾಗೂ ಹೌಸಿಂಗ್ ಕಾಲೋನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ವೆಚ್ಚ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಉಡಸಲಮ್ಮ ಕೆರೆ ಕಟ್ಟೆ ಮತ್ತು 1 ನೇ. ವಾರ್ಡಿನಲ್ಲಿ ಬರುವ ಉದ್ಯಾನವನ ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದ ಕೂಡ್ಲಿಗಿ ಜನತೆಯ ಬಹು ಬೇಡಿಕೆ ಯಾಗಿತ್ತು. ಆದ್ದರಿಂದ ಉದ್ಯಾನವನಗಳು ಸ್ವಚ್ಛತೆಯ ಇಲ್ಲದೇ ಹಾಳು ಕೊಂಪೆ ಯಾಗಿತ್ತು ಪಟ್ಟಣದ ಜನರು ಆಯಾಸವನ್ನು ಕಳೆಯಲು ಹಸಿರು ವಾತಾವರಣ ಸೃಷ್ಟಿಸಿ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಸಾಮಾನುಗಳು, ವಿದ್ಯುತ್ ದೀಪ ವ್ಯವಸ್ಥೆ, ವಾಯು ವಿಹಾರ ಮಾಡುವವರಿಗೆ ಎಲ್ಲಾ ಸೌಕರ್ಯಗಳನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಈ ಅನುದಾನ ಸಾಕಾಗುವುದಿಲ್ಲ ಆದ್ದರಿಂದ ಕೆಲವು ಯೋಜನೆಗಳಲ್ಲಿನ ಅನುದಾನ ಇನ್ನು ಹೆಚ್ಚಿನ ಅನುದಾನವನ್ನು ನೀಡಲಾಗುವುದು ಮಾನ್ಯ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರು ಕಾವಲಿ ಶಿವಣ್ಣ , ಉಪಾಧ್ಯಕ್ಷರು ಲೀಲಾವತಿ ಪ್ರಭಾಕರ್ ರವರು, ಸದಸ್ಯರಾದ ತಳವಾಸ್ ವೆಂಕಟೇಶ್, ಶೂಕುರ್, ಈಶಪ್ಪ, ಜಯಮ್ಮರು ರಾಘವೇಂದ್ರ, ಸಿರಿಬಿ ಮಂಜುನಾಥ, ದಾಣಿ ರಾಘವೇಂದ್ರ, ಭಾಷ ನಾಯ್ಕ, ಪೂರ್ಯ ನಾಯ್ಕ್, ಪ್ರಮುಖ ಮುಖಂಡರಾದ ಉದಯ ಜನ್ನು, ಸಿ.ಉಮೇಶ ನಲ್ಲಾಮುತ್ತಿ ದುರ್ಗೇಶ್, ಸುರೇಶ್, ಓಬಣ್ಣ, ನಜೀರ್ ಸಾಬ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ