ತಾಲೂಕಿನಲ್ಲಿ ದಿನಕ್ಕೊಂದು ಸಮಸ್ಯೆ ಹೆಚ್ಚುತ್ತಿದೆ – ಹೋರಾಟಗಾರರ ಆಕ್ರೋಶ.
ಮಾನ್ವಿ ಜ.24

ಬಡವರಿಗೆ ಸಿಗಬೇಕಾದ ಪಡಿತರ ಕಾರ್ಡ್ ಶ್ರೀಮಂತರಿಗೆ ಸಿಗುತ್ತದೆ ಎಂಬುದು ಮಾನ್ವಿಯಲ್ಲಿ ಚರ್ಚೆಯ ಮಾತು. ಆದರೆ ಗೊಲ್ಲದಿನ್ನಿ ಗ್ರಾಮಸ್ಥರು ನಿತ್ಯ ಮಾನ್ವಿ ಕಂದಾಯ ಕಚೇರಿಗೆ ಅಲೆದರು ಎರಡು ವರ್ಷದಿಂದ ಪಡಿತರ ಭಾಗ್ಯ ಸಿಗದೆ ನರಳಾಡುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಟಪ್ಪ ಎಲ್ಲಿದ್ದೀಯಪ್ಪ ಬಡವರು ಮಾನ್ವಿ ಕಂದಾಯ ಕಚೇರಿಗೆ ಅಲೆದರು ಎರಡು ವರ್ಷದಿಂದ ಪಡಿತರ ಬಂದಿಲ್ಲ ಎಂದು ಗೋಳಾಡುತ್ತಿದ್ದಾರೆ. ಮಾನ್ವಿ ಆಹಾರ ಇಲಾಖೆಯಿಂದ ಕಾರ್ಡ್ ಮಂಜೂರಾತಿ ಮಾಡಿದ ಬಗ್ಗೆ ತನಿಖೆಯಾದರೆ ಅಧಿಕಾರಿಗಳ ಕಳ್ಳಾಟ ಬಯಲಾಗುತ್ತದೆ ಎಂದು ಗೊಲ್ಲದಿನ್ನಿ ಗ್ರಾಮಸ್ಥರ ಆರೋಪವಾಗಿದೆ.
ಮಾನ್ವಿ ಕಂದಾಯ ಕಚೇರಿಗೆ ನಿತ್ಯ ಅಲೆದರು ಯಾಕೆ ಬಡವರಿಗೆ ಬಿಪಿಎಲ್ ದೊರೆಯುತ್ತಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಪ್ಪ ಸಾಹೇಬ್ರನ್ನ ವಿಧಾನ ಸೌಧದ ಮೂರನೆ ಮಹಡಿಯಲ್ಲಿ ಕೂರಿಸಿ ಸನ್ಮಾನಿಸ ವರದಿ ಪಡೆದರೆ ಅಧಿಕಾರಿಗಳ ಕೈಚಳಕ ಬಯಲಿಗೆ ಬೀಳೋದು ಪಕ್ಕಾ ಎಂದು ಮಾನ್ವಿ ಜನತೆಯ ಮಾತಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ