ಕರ್ತವ್ಯ ಮರೆತು ಗಾಢ ನಿದ್ರೆಗೆ ಜಾರಿದ ಸಹಾಯಕ – ಆಡಳಿತ ಅಧಿಕಾರಿ.
ರೋಣ ಜ.31

ಭಾರತ ರತ್ನ ಡಾ, ಭೀಮಸೇನ್ ಜೋಶಿ ಸರ್ಕಾರಿ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಅಶ್ವಥ್ ನಾರಾಯಣ ಸ್ವಾಮಿಯವರು ಮಧ್ಯಾಹ್ನದ ಒತ್ತು ಆಯಿತು ಎಂದರೆ ಹೆಚ್ಚಾಗಿ ತಮ್ಮ ಆಸ್ಪತ್ರೆಯಲ್ಲಿ ನಿದ್ರೆಗೆ ಜಾರಿರುವುದು ದೊಡ್ಡ ದುರಂತವಾಗಿದೆ.ಪಟ್ಟಣದ ತಾಲೂಕು ಆರೋಗ್ಯ ಇಲಾಖೆಯ ಸಹಾಯಕ ಅಶ್ವತ್ಥನಾರಾಯಣ ಕರ್ತವ್ಯ ಸಮಯದಲ್ಲಿ ನಿದ್ದೆ ಮಾಡುತ್ತಿರುವ ದೃಶ್ಯವನ್ನು ನಮ್ಮ ಸುಶೀಲವಾಣಿ ವರದಿಗಾರರು ಸೆರೆ ಹಿಡಿದು ಅವರನ್ನು ಕೇಳಿದಾಗ ನಿದ್ದೆ ಮಾಡುತ್ತಿಲ್ಲ ಎಂಬ ಹಾರೈಕೆ ಉತ್ತರ ನೀಡಿದರು. ಏಕೆ? ಕರ್ತವ್ಯದಲ್ಲಿ ಇದ್ದಾಗ ನಿದ್ದೆ ಮಾಡುವುದು ಸರಿ ಅಲ್ಲ ಅಂತ ಹೇಳಿದರು. ಅವರು ತಮ್ಮ ತಪ್ಪು ಆದರೂ ನಾನು ಎಲ್ಲಿ ನಿದ್ದೆ ಮಾಡುತ್ತಿದ್ದೇನೆ ಎಂಬ ಉತ್ತರ ನೀಡಿದ್ದರು. ಆದ್ರೆ ನಾವು ಜಿ.ಪಿ.ಎಸ್ ಫೋಟೋ ತೆಗೆದು ತೋರಿಸಿದ್ದರು ಅವರು ಒಪ್ಪಲಿಲ್ಲ ಇಂತಹ ಅಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿ ತಮ್ಮ ಕರ್ತವ್ಯ ನಿಷ್ಕಾಳಜಿ ವಹಿಸುವುದು ಎಷ್ಟರ ಮಟ್ಟಿಗೆ ಸರಿ ಅಂತ ನೀವೇ ಹೇಳಿ ಎಂದರು ಅವರದ್ದು ಒಂದೇ ಉತ್ತರ ನಾನು ನಿದ್ದೆ ಎಲ್ಲಿ ಮಾಡುತ್ತಿದ್ದೇನೆ ಅನ್ನುವ ಉತ್ತರ ನಾವು ಜನರ ದೂರಿನ ಅನ್ವಯ ಅಲ್ಲಿಗೆ ಹೋದಾಗ ಪ್ರತ್ಯಕ್ಷ ಸಾಕ್ಷಿ ಕಂಡರು ಇತಂಹ ನಿಷ್ಕಾಳಜಿ ತೋರಿಸುವ ಅಧಿಕಾರಿಗಳು ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಜ್ವಲಂತ ಸಮಸ್ಯೆಯಾಗಿ ಪರಿಣಮಿಸುತ್ತದೆ.ತಾಲೂಕಾ ಆರೋಗ್ಯ ಆಡಳಿತ ಮೇಲಧಿಕಾರಿಗಳಾದ ಮತ್ತು ಎಲುಬು ಕೀಲು ತಜ್ಞರಾದ ಡಾಕ್ಟರ್ ಶಕೀಲ ದಂದರಗಿ ಅವರಿಗೆ ಫೋನ್ ಮೂಲಕ ನಡೆದ ಘಟನೆ ಬಗ್ಗೆ ಹೇಳಿದಾಗ ಆಶ್ವಥ ನಾರಾಯಣ ಅವರಿಗೆ ಸುಗರ ಬಿ.ಪಿ ಇದೆ ಅಂತಾ ಉತ್ತರ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ.ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಮಾನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಗತಿ ಏನು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡು ವಂತಾಗಿದೆ. ರೋಣ ನಗರದ ಸರ್ಕಾರಿ ಆಸ್ಪತ್ರೆಗೆ ಡಾಕ್ಟರ್ ಭೀಮಸೇನ್ ಜೋಶಿ ಮಹಾನ್ ವ್ಯಕ್ತಿ ಹೆಸರು ಇಡಲಾಗಿದೆ. ಇಂತಹ ವ್ಯಕ್ತಿಯ ಆಸ್ಪತ್ರೆಯಲ್ಲಿ ನಿದ್ದೆಗೆ ಜಾರಿದ ಅಧಿಕಾರಿಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ ಗದಗ