ಹಂಡೆ ವಜೀರ್ ಸಮಾಜದ ರಾಜ್ಯ ಸಮಾವೇಶಕ್ಕೆ ಮುದ್ದೇಬಿಹಾಳ ಕ್ಷೇತ್ರದಿಂದ – 25 ಸಾವಿರ ಜನರು ಬಾಗಿ.
ಮುದ್ದೇಬಿಹಾಳ ಜ.31

ಬಾಗಲಕೋಟ ಜಿಲ್ಲೆಯ ಕೂಡಲ ಸಂಗಮದಲ್ಲಿ ಫೆಬ್ರುವರಿ 2 ರಂದು ಕಲ್ಬುರ್ಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಸಹಯೋಗದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆ ವಜೀರ ಸಮಾಜದ 3 ನೇ. ರಾಜ್ಯಮಟ್ಟದ ಬೃಹತ್ ಸಮಾವೇಶಕ್ಕೆ ಮುದ್ದೇಬಿಹಾಳ ಕ್ಷೇತ್ರದಿಂದ 25 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶ್ ಕರಬಂಟನಾಳ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಪುರ. ಬಾಗಲಕೋಟಿ. ಯಾದಗಿರಿ. ರಾಯಚೂರ. ಬಳ್ಳಾರಿ. ಜಿಲ್ಲೆಗಳಲ್ಲಿ ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಎಲ್ಲರಿಗೂ ಅನುಕೂಲ ವಾಗುವ ನಿಟ್ಟಿನಲ್ಲಿ ಕೂಡಲ ಸಂಗಮ ಕ್ಷೇತ್ರ ಆಯ್ಕೆ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಅದೇ ವೇಳೆಯಲ್ಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಶಂಕರಗೌಡ ರಾಯಗೊಂಡ. ಜಿಲ್ಲಾ ಯುವ ಘಟಕದ ಅಧ್ಯಕ್ಷ ನಾಗರಾಜ್ ತಂಗಡಗಿ. ತಾಲೂಕ ಅಧ್ಯಕ್ಷ ಎಂ.ಬಿ ಬಿರಾದಾರ (ವಕೀಲರು) ಮಾತನಾಡಿದರು. ಸಮಾಜದ ತಾಲೂಕ ಉಪಾಧ್ಯಕ್ಷ ಭೀಮನಗೌಡ ಬಿರಾದಾರ್. ಮುಖಂಡರಾದ ಬಾಲನಗೌಡ ಪಾಟೀಲ್ ಚನ್ನಪ್ಪ ಗೌಡ ಹೊಸ ಗೌಡರ್ ಹನುಮಗೌಡ ಪಾಟೀಲ್ ಸಾಗರ್ ಹುನುಕುಂಟಿ ಸುದ್ದಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ