ಕೆರೆ ತುಂಬುವ ಯೋಜನೆ ಆದಷ್ಟು ಬೇಗ ಈಡೇರಿಕೆಗೆ – ರೈತ ಸಂಘದಿಂದ ಆಗ್ರಹ.
ಬೆಕಿನಾಳ ಜ.31

ತಾಳಿಕೋಟೆ ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಕೆರೆಗೆ ನೀರು ತುಂಬಿಸುವಂತೆ ರೈತ ಸಂಘದ ತಾಲೂಕು ಅಧ್ಯಕ್ಷರು ಶ್ರೀಶೈಲ ವಾಲಿಕಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬೆಕಿನಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರವೀಂದ್ರ ಸುಧಾಕರ್ ಆದಷ್ಟು ಕೆರೆಗೆ ನೀರು ತುಂಬಿಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು.D.S.S ತಾಳಿಕೋಟೆ ತಾಲೂಕ ಅಧ್ಯಕ್ಷರು ಯಮನೂರ ಸಿಂದಗಿರಿ ಇವರ ಈಗಾಗಲೇ ನಮ್ಮ ಭಾಗದ ದೇವರ ಹಿಪ್ಪರಗಿ ಮತಕ್ಷೇತ್ರದ ಸನ್ಮಾನ್ಯ ಶಾಸಕರಾದ ರಾಜು ಗೌಡ ಪಾಟೀಲ್ ಇವರಿಗೆ ಈಗಾಗಲೇ ನಾವು ಮನವಿ ಕೊಟ್ಟಿದ್ದೇವೆ ಟೆಂಡರ್ ಕೂಡ ಆಗಿದೆ ವಾರದಲ್ಲಿ ಬೆಕಿನಾಳ ಗ್ರಾಮದಲ್ಲಿ ಇರುವ ಕೆರೆಗೆ ನೀರು ತುಂಬಿಸುವ ಕೆಲಸ ಪ್ರಾರಂಭ ಆಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.
ಒಂದು ವಾರದಲ್ಲಿ ಬೆಕಿನಾಳ ಗ್ರಾಮದಲ್ಲಿರುವ ಕೆರೆಗೆ ನೀರು ತುಂಬಿಸುವ ಯೋಜನೆ ಕೆಲಸ ಪ್ರಾರಂಭವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಶ್ರೀಶೈಲ್ ಸಂಗಾಪುರ್. ಲಕ್ಷ್ಮಣ್ ಚಲವಾದಿ. ಅನೇಕ ಗ್ರಾಮಸ್ಥರು ಸೇರಿದಂತೆ ಒಟ್ಟಾರೆ ಬೆಕಿನಾಳ ಕೆರೆಗೆ ನೀರು ತುಂಬಿದರೆ ರೈತರಿಗೆ ಅನುಕೂಲ ಆಗುತ್ತದೆ. ಒಂದು ಜಾನುವಾರುಗಳಿಗೆ ಅನುಕೂಲ ವಾಗುತ್ತದೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ