“ದೇವರ ಹಿಪ್ಪರಗಿ ಶರಣಜ್ಯೋತಿ ಮಡಿವಾಳ ಮಾಚಿದೇವ ಜಯಂತಿ ಸರ್ವರಲಿ ಶುಭ ಹರುಷ ತರಲಿ”…..

ಶರಣ ಜ್ಯೋತಿ ಮಡಿವಾಳ ಮಾಚಿದೇವ
ಶಿವನ ಕೃಪೆ ವೀರಭದ್ರ ಅವತಾರಿ
ಮಾಚಿದೇವ ದೇವಾನು ದೇವತೆಗಳ ನಾಡು
ದೇವರಹಿಪ್ಪರಗಿ ಪರ್ವತಪ್ಪ ಸುಜ್ಜಾನಿ
ಪುಣ್ಯ ಗರ್ಭದಿ ಜನಸಿದ
ಬಸವ ಚಿಜ್ಯೋತಿಯ ಅನುಭವ ಮಂಟಪ
ಶುಧ್ಧತೆಯ ರೂವಾರಿ ನಿತ್ಯ ನಿಷ್ಠೆಯ
ಮಡಿ ಕಾಯಕಯೋಗಿ
ಸೋಮಾರಿಗಳ ದುರ್ಗುಣ ಬಡವರ
ಶೋಷಿಸುವರ ಸದೆ ಬಡೆದ ಶರಣ ಯೋಧ
ಸಮಾಜದ ಅಂಕುಡೊಂಕುತನವ
ಕಲಿದೇವರದೇವ ಅಂಕಿತ ನಾಮದಿ ವಚನ
ಸಾರಿದ
12ನೇ ಶತಮಾನ ಶರಣ ಸಂತ
“ಅರಸುತನ ಮೇಲಲ್ಲ ಅಗಸತನ ಕೀಳಲ್ಲ”
ಮಡಿವಾಳ ಧರ್ಮ ಸಂಸ್ಥಾಪಕ
ಮನದ ಮಲೀನತೆ ಸುಚಿ ಮಾಡಿದಾತ
ಅಶ್ವರೂಢ ಮಡಿವಾಳ ಮಾಚಿದೇವ
ರಾಜ ಬಿಜ್ಜಳನ ಸೈನ್ಯ ಸದೆ ಬಡೆದ
ಮಹಾನ್ ಯೋಧಕಲ್ಯಾಣ ಕ್ರಾಂತಿಯಲಿ ಶರಣಾದ
ಬಿಜ್ಜಳ ರಾಜ ಸಮಗ್ರ ವಚನ ರಕ್ಷಕ
ವಿಶ್ವದಿ ವಚನಗಳ ಬೆಳಕು ಚೆಲ್ಲಿದ
ವೀರಾಧಿವೀರ
ವೀರಘಂಟೆ ನಾದ ಜಗದಿ ಮಾರ್ಧನಿಸಿ
ಭಕ್ತಿ ರಸ ನಿರಂತ ಜನಮಾನಸದಲಿ
ಶರಣ ಸಂಸ್ಕಾರ ಸಂಸ್ಕೃತಿ ನಿತ್ಯ ಸತ್ಯ
ಧರ್ಮಜ್ಯೋತಿ ಅನವರತ ಬೆಳಗುತಿದೆ
ಸರ್ವ ಹೃದಯ ಮಂದಿರಗಳಲಿ
ದೇವರ ಹಿಪ್ಪರಗಿ ಶರಣ ಜ್ಯೋತಿ
ಮಡಿವಾಳ ಮಾಚಿದೇವ ಜಯಂತಿ
ಅಮೃತ ಘಳಿಗೆ
ಸರ್ವರಲಿ ಶುಭ ಹರುಷ ತರಲಿ

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..