ಆಕಸ್ಮಿಕ ಬೆಂಕಿ ತಗುಲಿ ಐದಾರು ಮೇವಿನ ಮತ್ತು ಮೆಕ್ಕೆ ಜೋಳದ ಬಣಿವೆಗಳ ಹಾಗೂ ತೊಗರಿ ಕಾಳು – ಸುಟ್ಟು ಭಸ್ಮ.
ಮಾದೂರ ಪೆ.01

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಮೇವಿನ ಬಣವೆ, ಮೆಕ್ಕೆಜೋಳ ಬಣವೆ ಸೇರಿದಂತೆ ಕೃಷಿ ಪರಿಕರಗಳು ಬೆಂಕಿ ಗಾಹುತಿಯಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮಾದೂರು ಗ್ರಾಮದ ರೇಣುಕಮ್ಮ ಎಂಬುವರಿಗೆ ಸೇರಿದ್ದವು ಎನ್ನಲಾಗಿದೆ.
ಗ್ರಾಮ ಲೆಕ್ಕಿಗರಾದ ಪ್ರಭಾಕರ ಸ್ಥಳಕ್ಕೆ ಭೇಟಿ ನೀಡಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ಸಲ್ಲಿಸುವದಾಗಿ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ಕೆ.ಶರಣಬಸವರೆಡ್ಡಿ, ಸಿಬ್ಬಂದಿ ರಾಜಕುಮಾರ ಮಾಳಪ್ಪ ಅನಿ, ಜಿ.ಮಂಜುನಾಥ್, ಶಿವಶಂಕರ, ವೀರೇಂದ್ರ ಮತ್ತಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ