ದಿಢೀರ್ ಪ್ರತಿಭಟನೆ, ಬಸ್ ನಿಲ್ದಾಣ ದೊಳಗೇ ಬಸ್ ಬರುವ – ವ್ಯವಸ್ಥೆಗೆ ಒತ್ತಾಯ.
ನರೇಗಲ್ ನ.21

ಪಟ್ಟಣದ ಹೊಸ ಬಸ್ ನಿಲ್ದಾಣ ದೊಳಗೆ ಬಸ್‌ಗಳು ಬಾರದ ನೇರವಾಗಿ ಗಜೇಂದ್ರಗಡ-ಗದಗ ಕಡೆಗೆ ಹೋಗುತ್ತಿರುವ ಕಾರಣ ಜನರಿಗೆ ತೊಂದರೆ ಯಾಗುತ್ತಿದೆ ಎಂದು ಸ್ಥಳೀಯರು ಬಸ್ ತಡೆದು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಈ ಮೊದಲಿನಂತೆ ಎಲ್ಲಾ ವಾಹನಗಳನ್ನು ನರೇಗಲ್ ಪಟ್ಟಣದಲ್ಲಿ ನಿಲ್ಲಿಸುವಂತೆ ಆಗ್ರಹಿಸಿದರು. ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ ಮಾತನಾಡಿ, ಶೇ 90 ರಷ್ಟು ಜನರು ಸಾರಿಗೆ ವಾಹನಗಳ ಮೇಲೆ ಅವಲಂಬನೆ ಯಾಗಿದ್ದಾರೆ. ಈಗ ತಡೆ ರಹಿತ ಸಂಚಾರದ ಮೂಲಕ ಜನರು ಪರದಾಡುವಂತೆ ಮಾಡುತ್ತಿದ್ದಾರೆ ಎಂದರು. ಈ ಮೊದಲು ಹೀಗೆ ಘಟನೆ ನಡೆದಾಗ ಗದಗ ಸಾರಿಗೆ ಡಿಸಿ, ಘಟಕ ವ್ಯಪಸ್ಥಾಪಕರಿಗೆ ಮನವಿ ಕೊಟ್ಟಿದ್ದೇವೆ ಹಾಗೂ ರೋಣ ಶಾಸಕರು ಸಹ ಜನರಿಗೆ ತೊಂದರೆ ಯಾಗದಂತೆ ಬಸ್‌ಗಳನ್ನು ಬಿಡಲು ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯರು ಪೋನ್ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿದರು. ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ನಂತರ ವಾಹನಗಳ ಸಂಚಾರಕ್ಕೆ ಜನರು ಅನುವು ಮಾಡಿ ಕೊಟ್ಟರು. ಮುಖಂಡ ನಿಂಗನಗೌಡ ಲಕ್ಕನಗೌಡ್ರ, ಶಿವು ಕೊಪ್ಪದ, ರಮೇಶ ಪಲ್ಲೇದ, ಶಿವು ಮುಳಗುಂದ, ರವಿ ಮಣ್ಣೂಡ್ಡರ, ಮನು ರಾಯಬಾಗಿ, ನಾಗನಗೌಡ್ರು ನಾಡಗೌಡ್ರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಾಳ ರೋಣ