ಧೂಳು ಮುಕ್ತ ಮಾಡುವಂತೆ ಕೋನಾಪುರ ಪೇಟೆಯ ನಿವಾಸಿಗಳಿಂದ ಪ್ರತಿಭಟನೆ.
ಮಾನ್ವಿ ಜ.29

ಪಟ್ಟಣದ ಕೋನಾಪುರ ಪೇಟೆಯ ಮಾರ್ಗದಲ್ಲಿ ಖನಿಜ ಸಂಪತ್ತು ಲೂಟಿ ಮಾಡುವ ಟಿಪ್ಪರ್ ಗಳ ಸಂಚಾರ ಹೆಚ್ಚಿದ್ದರಿಂದ ಧೂಳು ವಿಪರೀತವಾಗಿದ್ದು, ಸರಕಾರ ಕಾನೂನು ಕ್ರಮ ಕೈಗೊಂಡು ಧೂಳು ಮುಕ್ತ ಮಾಡಬೇಕು ಎಂದು ಆಗ್ರಹಿಸಿ ಕೋನಾಪುರ ಪೇಟೆಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕೋಮಾಪುರ ಪೇಟೆಯಿಂದ ಟಿಪ್ಪರ್ ಗಳ ಸಂಚಾರ ಜಾಸ್ತಿ ಇರುವ ಕಾರಣ ನಮಗೆ ತೊಂದರೆಯಾಗಿದೆ. ಹಾಗೆಯೇ ಧೂಳಿನಿಂದಾಗಿ ವೃದ್ಧರಿಗೆ ಹಾಗು ಮಕ್ಕಳಿಗೆ ಶ್ವಾಸಕೋಶದ ತೊಂದರೆ ಯಾಗುತ್ತದೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಮಾನ್ವಿ ಪಟ್ಟಣದ ಕೋನಾಪುರ ಪೇಟೆಯ ಮಾರ್ಗವಾಗಿ ಓವರ್ ಲೋಡ್ ಮೂಲಕ ಟಿಪ್ಪರ್ ಗಳು ಸಂಚಾರ ಮಾಡಿದರು. ಸಹ ಮಾನ್ವಿ ಪೊಲೀಸ್ ಇಲಾಖೆ, ರಾಯಚೂರು ಗಣಿ ಇಲಾಖೆ, ಮಾನ್ವಿ ತಹಸೀಲ್ದಾರ್, ಆರ್.ಟಿ.ಒ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದ ಓವರ್ ಲೋಡ್ ಮಾಫಿಯಾ ದಂಧೆ ನಡೆಯುತ್ತಿದೆ ಎಂದು ಇದಕ್ಕೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ