ಶ್ರೀ ಶರಣ ಬಸವೇಶ್ವರ ಕಾರ್ತಿಕೋತ್ಸವ – ಜರುಗಿತು.
ಕಾನಮಡುಗು ಡಿ.10

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಹೋಬಳಿಯ ಕಾನಾಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಸೋಮವಾರ ಸಂಜೆ ಸರಳವಾಗಿ ಜರುಗಿತು. ಇಂದು ಸಂಜೆ ಕಾನಮಡುಗು ದಾಸೋಹ ಮಠದ ಆವರಣದಲ್ಲಿ ಧರ್ಮಾಧಿಕಾರಿಗಳಾದ ದಾಸೋಹ ಮಠದ ಐಮಡಿ ಶರಣಾರ್ಯರು. ಚೆನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಾಚಾರ್ಯ ಸ್ವಾಮೀಜಿಗಳು. ದೀಪಾ ಹಚ್ಚುವುದರ ಮೂಲಕ ಕಾರ್ತಿಕ ಉತ್ಸವಕ್ಕೆ ಚಾಲನೆ ನೀಡಿದರು.

ಕಾರ್ತಿಕೋತ್ಸವ ಕ್ಕೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ಶ್ರೀಶರಣ ಬಸವೇಶ್ವರ ಸ್ವಾಮಿಯ ಭಕ್ತರು ಆವರಣದಲ್ಲಿ ದೀಪಗಳಿಗೆ ಎಣ್ಣೆ. ಬತ್ತಿ ಹಾಕಿ ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು. ಶ್ರೀ ಶರಣ ಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಗಳ ನಡುವೆ ಪೂಜೆ ಸಲ್ಲಿಸಲಾಯಿತು.

ದಾಸೋಹ ಮಠದ ಹೊರ ಬಾಗಿಲಿಗೆ ದೇವಸ್ಥಾನದ ಗೋಪುರಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಣ್ಣೆ ಬತ್ತಿ ದೀಪಗಳು ಕಂಗೊಳಿಸುತ್ತಿದ್ದವು. ಕಾರ್ತಿಕೋತ್ಸವದಲ್ಲಿ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಗ್ರಾಮಸ್ಥರು ಸಹ ಪಾಲ್ಗೊಂಡಿದ್ದರು ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ

