ಕ್ರೀಡೆಯಿಂದ ನಮ್ಮ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದು – ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಹೇಳಿಕೆ.

ಗದಗ ಫೆ.08

ಕ್ರೀಡೆಗಳು ನಮ್ಮ ಜೀವನದಲ್ಲಿ ಬಹುಮುಖಿ ಮತ್ತು ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ. ಕ್ರೀಡೆಗಳು ವಿಭಿನ್ನ ಸಂಸ್ಕೃತಿಗಳ ನಡುವೆ ಸಾಮಾನ್ಯ ಭಾವನೆಯನ್ನು ಹೆಣೆಯುವ ಶಕ್ತಿಯನ್ನು ಹೊಂದಿವೆ. ಯಾವುದು ಒಳ್ಳೆಯದು ಅಥವಾ ಕೆಟ್ಟದು ಎಂಬುದರ ಕುರಿತು ಯಾವುದೇ ವ್ಯತ್ಯಾಸವನ್ನು ಕಂಡು ಕೊಳ್ಳಬಾರದು, ಆದರೆ ಕ್ರೀಡೆಯಿಂದ ನಮ್ಮ ಜೀವನದಲ್ಲಿ ಯಾವ ಒಳ್ಳೆಯದನ್ನು ಕಲಿಯಬಹುದು ಮತ್ತು ಅಳವಡಿಸಿ ಕೊಳ್ಳಬಹುದು ಎಂಬುದನ್ನು ಒಪ್ಪಿ ಕೊಳ್ಳೋಣ. ಒಂದು ಅಂಕವನ್ನು ಸಾಧಿಸುವುದು ಅಥವಾ ಅಂಕಗಳನ್ನು ಗಳಿಸುವುದನ್ನು ಮೀರಿ, ಕ್ರೀಡೆಗಳಿಂದ ಉತ್ತಮ ಪಾಠಗಳನ್ನು ಕಲಿಯಬಹುದು. ನಮ್ಮ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ಅದು ನಮಗೆ ನೀಡುವ ಪ್ರಯೋಜನಗಳನ್ನು ವಿವರವಾಗಿ ವಿವರಿಸುತ್ತದೆ. ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಹೇಳಿದರು.ನಗರದ ಕೆ.ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2024-25 ನೇ. ಸಾಲಿನ ಗ್ರಾಮೀಣಾ-ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ‘ಸಾರ್ವಜನಿಕ ಸೇವೆಯಲ್ಲಿ ಇರುವವರು ಸಂಯಮ ಹಾಗೂ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಮಾನಸಿಕ ಆರೋಗ್ಯ ಮುಖ್ಯವಾಗಿದೆ. ಮಾನಸಿಕ ಆರೋಗ್ಯ ಕಾಯ್ದು ಕೊಳ್ಳಲು ನಿತ್ಯದ ಜೀವನ ಶೈಲಿಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿ ಕೊಳ್ಳಬೇಕು’ ಎಂದರು.ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ‘ನೌಕರರ ಕ್ಷೇಮಾಭಿವೃದ್ಧಿಗೆ ಸಂಘವು ಸದಾ ನಿಮ್ಮೊಂದಿಗಿರುತ್ತದೆ ಕ್ರೀಡೆಗಳಲ್ಲಿ ಹೆಚ್ಚು ಉತ್ಸುಕತೆ ಯಿಂದ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆಯ ಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭರತ್.ಎಸ್ ಉಪ ಕಾರ್ಯದರ್ಶಿ ಸಿ.ಆರ್ ಮುಂಡರಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನೀಯರ್ ರಮೇಶ ಪಾಟೀಲ, ಕ್ರೀಡಾಧಿಕಾರಿ ಶರಣು ಗೋಗೇರಿ ಸೇರಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button