ತಾಲೂಕಿನ ಶಾಲೆಗಳಿಗೆ ಕಳಪೆ – ತೊಗರಿ ಬೇಳೆ ಸರಬರಾಜು.
ಮಾನ್ವಿ ಫೆ.08

ಶಾಲಾ ಮಕ್ಕಳಿಗೆ ಬಿಸಿಯೂಟದ ಮೂಲಕ ಗುಣಮಟ್ಟದ ಆಹಾರ ಸರಬರಾಜು ಮಾಡಬೇಕೆಂದು ಸರಕಾರ ಹೇಳುತ್ತದೆ. ಆದರೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳಪೆ ಮಟ್ಟದ ತೊಗರಿ ಬೇಳೆ ಸರಬರಾಜಾಗಿದ್ದು, ಮಕ್ಕಳಿಗೆ ಅನಾಹುತ ವಾದರೆ ಯಾರು ಹೊಣೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಹಂಪಯ್ಯ ನಾಯಕರೆ ನಿಮ್ಮ ಸರಕಾರ ಸಾಧನೆನಾ ಇದು, ಕಪಗಲ್ ಗ್ರಾಮದ ಶಾಲೆಗೆ ಗುತ್ತಿಗೆದಾರರು ಕಳಪೆ ಮಟ್ಟದ ಬೇಳೆ ಸರಬರಾಜು ಮಾಡುತ್ತಿದ್ದಾರೆ ಎಂದರೆ ಏನಾದರು ಅನಾಹುತವಾದರೆ ಮಕ್ಕಳ ಹೆಸರಲ್ಲಿ ಸರಕಾರವೇ ಲೂಟಿ ಮಾಡುತ್ತಿದೆಯಾ ಎಂದು ಕಳಪೆ ತೊಗರಿ ಬೇಳೆ ಸರಬರಾಜು ಮಾಡಿರುವುದೇ ಸಾಕ್ಷಿ.
ಬಡ ಮಕ್ಕಳ ಹೆಸರಿಗೆ ಬಿಸಿಯೂಟದ ಹೆಸರಿಗೆ ಕಳಪೆ ಆಹಾರ ಸರಬರಾಜುದರು ಸಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಮಾನ್ವಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಕ್ರಮ ಜರುಗಿಸದೆ ಸುಮ್ಮನಿದ್ದಾರೆ ಎಂದರೆ ಗುತ್ತಿಗೆದಾರ ರೊಂದಿಗೆ ಬಿ.ಇ.ಒ ಚಂದ್ರಶೇಖರ ದೊಡ್ಡಮನಿ ಶಾಮೀಲಾಗಿದ್ದಾರೆಂದು ಕಳಪೆ ತೊಗರಿ ಬೇಳೆ ಸರಬರಾಜು ಕಾರಣ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ