ಸಿದ್ಧಾರೋಡರ ಮಹಾ ಪುರಾಣ – ಮಂಗಲ ಕಾರ್ಯಕ್ರಮ.
ಕೋರವಾರ ಫೆ.09


ದೇವರ ಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಕೋರವಾರ ಗ್ರಾಮದ ಶ್ರೀ ಕಾಶಿ ವಿಶ್ವನಾಥ ಕೈಲಾಸ ಮಂದಿರದಲ್ಲಿ ಶ್ರೀ ಸಿದ್ದಾರೋಡರ ಮಹಾ ಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಎರಡು ಪಲ್ಲಕ್ಕಿಯೊಂದಿಗೆ ಕಳಸ, ಕುಂಬ, ಪುರವಂತರು, ವಾಲಗದೊಂದಿಗೆ ಪುರದ ಬೀದಿಗಳ ಮೂಲಕ ನಡೆಯಿತು.


ಮಧ್ಯಾಹ್ನ ಮಹಾ ಪುರಾಣ ಮಂಗಲ ಸಮಾರಂಭದ ದಿವ್ಯ ಸಾನಿದ್ಯ ಶ್ರೀ ಶ್ರೋ. ಬ್ರ. ಅಭಿನವ ಮುರುಗೇಂದ್ರ ಮಹಾ ಸ್ವಾಮಿಗಳು ಚೌಕಿಮಠ ಕೋರವಾರ, ಪುರಾಣಿಕರಾದ ಶ್ರೀ ರಮೇಶ ಶರಣರು ಕೋರವಾರ. ಮತ್ತು ನಿಂಗಣ್ಣ ಶರಣರು. ಹಾಗೂ ಶ್ರೀ ಕೈಲಾಸ ಮಠದ ಸರ್ವ ಭಕ್ತಾದಿಗಳಾದ ಶಿವಪ್ಪ ತಾಳಿಕೋಟಿ ಗುರಣ್ಣ ಚಾಂದಕವಟೆ ಕೆ.ಕೆ ಆರುಟಿಸಿ ನಿವೃತ್ತ ಅಧಿಕಾರಿಗಳು ಗುಲ್ಬರ್ಗಾ.

ನಿಂಗಣ್ಣ ಸಜ್ಜನ್ ಚನ್ನಪ್ಪ ಬದ್ರಗೊಂಡ,ಲ ಚಿದಾನಂದ ನಾಸಿ, ಭೀಮನಗೌಡ ಹಳವಣ್ಣಿ, ಬಸವರಾಜ ಸುಂಬಡ, ಚನ್ನಪ್ಪಗೌಡ ಬಿರಾದಾರ, ಅಶೋಕ ಹುಣಸಗಿ, ಸಂತೋಷ ಯತ್ನಾಳ, ಮಾಂತೇಶ ಜಂಬುಗೋಳ, ರಾಮು ಯತ್ನಾಳ, ಮಾಂತಪ್ಪ ಸುಂಬಡ, ಎಂ, ಡಿ,ಮನಹಳ್ಳಿ, ಅವರು ನಿರೂಪಿಸಿದರು, ಕೈಲಾಸ ಮಠದ ಸರ್ವ ಕಾರ್ಯಕರ್ತರು, ಭಕ್ತಾದಿಗಳು, ಗ್ರಾಮದ ಮುಖಂಡರು, ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ