ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಗುರು ವಂದನ ಕಾರ್ಯಕ್ರಮ ಮತ್ತು 8 ನೇ. ವರ್ಗದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಜರುಗಿತು.
ಗುಂಡಕರ್ಜಗಿ ಫೆ.09

ಮುದ್ದೇಬಿಹಾಳ ತಾಲೂಕಿನ ಗುಂಡ ಕರ್ಜಗಿ ಹಿರಿಯ ಪ್ರಾಥಮಿಕ ಶಾಲೆಯಲಿ ನಡೆದ ಶಾಲಾ ವಾರ್ಷಿಕೋತ್ಸವ ಗುರು ವಂದನ ಕಾರ್ಯಕ್ರಮ ಮತ್ತು 8 ನೇ. ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭಕ್ಕೆ ಆಗಮಿಸಿದ ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು ಮತ್ತು ಮೊದಲು ಶಾಲೆಯಲ್ಲಿ ಬೋಧನೆ ಮಾಡಿ ಬೇರೆ ಕಡೆ ವರ್ಗಾವಣೆ ಯಾದ ಶಿಕ್ಷಕರು ಶಿಕ್ಷಕಿಯರು ಊರಿನ ವ್ಯಕ್ತಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.

ಇದೇ ವೇಳೆಯಲ್ಲಿ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಬೋಧನೆ ಮಾಡಿದ ನಿವೃತ್ತಿಯಾದ ಶ್ರೀಮತಿ ಗೌರಮ್ಮ.ದ್ಯಾ ಪಾಟೀಲ್ ಮತ್ತು ಅಂಗನವಾಡಿ ಶಾಲೆಯ ಶಿಕ್ಷಕಿಯಾದ ಸುಧಾ ಬಾಯಿ.ಪಿ ಚಲವಾದಿ ಇವರು ಕೂಡ ನಿವೃತ್ತಿಯಾಗಿ ಅವರಿಗೆ ಶಾಲಾ ಸಿಬ್ಬಂದಿ ಮತ್ತು ಊರಿನ ಪರವಾಗಿ ಸನ್ಮಾನಿಸಲಾಯಿತು.

ಅದೇ ವೇಳೆಯಲ್ಲಿ ವರ್ಗಾವಣೆ ಯಾದ ಶಿಕ್ಷಕ ಶಿಕ್ಷಕಿಯರಿಗೂ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಗುರುಗಳಿಗೂ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿ.ಪಿ ಸಾಗರ್ ಅವರಿಗೂ ಕೂಡ ಸನ್ಮಾನಿಸಲಾಯಿತು. ಅದೇ ವೇಳೆಯಲ್ಲಿ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಸಲಾಯಿತು. ಅದೇ ವೇಳೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಹೊಸ ಸೌಂಡ್ ಸಿಸ್ಟಮ್ ನೆನಪಿನ ಕಾಣಿಕೆಯಾಗಿ ಕೊಡಿಸಿದರು.

ಅದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ರಾಮಪ್ಪ ನನ್ನಿಕೇರಿ. ಸಹ ಶಿಕ್ಷಕರಾದ ಪರಶುರಾಮ್ ಸಿರಗುಪ್ಪಿ. ನಿಂಗಪ್ಪ ರಾಥೋಡ್. ರವಿ ಸೋಮನಾಳ . ರಾಜು ತಳಗಡೆ. ಮತ್ತು ಶಿಕ್ಷಕಿಯರು. ವರ್ಗಾವಣೆ ಯಾದ ಶಿಕ್ಷಕರಾದ ರಾಜು ಗೌಡ ಬಿರಾದಾರ್. ರಾಜೇಶ್ ಹುಲಗನ್ನವರ್. ಶೋಭಾ ಹಿರೇಮಠ .ಶಕುಂತಲಾ ಇಲ್ಕಲ್ .ಬಸಪ್ಪ ಬೇರಾಳ .ರವಿ ಹಿಪ್ಪರಗಿ .ಪರಶುರಾಮ ಬಲಕುಂದಿ. ಗ್ರಾ. ಪಂ. ಸದಸ್ಯರಾದ ನಾಗರಾಜ್ ಇಳಗೇರ. ಅಪ್ಪಣ್ಣ ಬೆಳ್ಳಪ್ಪ ಮಾದರ್. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ. ಮಲ್ಲಪ್ಪ ದಳವಾಯಿ. ಸದಸ್ಯರಾದ ಶರಣಗೌಡ ಪಾಟೀಲ್. ದಸ್ಗೀರ್ ಸಾಬ್ ಮುಲ್ಲಾ. ಬಸವರಾಜ ಬಳಬಟ್ಟಿ. ಅಶೋಕ್ ಚಲವಾದಿ.ರಾಜ ಸಾಬ್ ಚಪ್ಪರ ಬಂದ್. ಶಿವಪ್ಪ ಚಲವಾದಿ. ಮತ್ತು ಊರಿನ ಯುವಕರು ಗುರು ಹಿರಿಯರು ಉಪಸಿದ್ಧರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ