ಪಿ.ಕೆ.ಪಿ.ಎಸ್ ಬ್ಯಾಂಕಿನ ನೂತನ ಕಟ್ಟಡವನ್ನು – ಸಚಿವ ಶಿವಾನಂದ ಪಾಟೀಲ್ ಮಾಡಿದರು.
ಮಣ್ಣೂರ ಫೆ.09

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಣ್ಣೂರ ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕಿನ ನೂತನ ಕಟ್ಟಡವನ್ನು ಸಚಿವರು ಶಿವಾನಂದ್ ಪಾಟೀಲ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದು ಕೊಂಡು ಜೀವ ಕಳೆದು ಕೊಳ್ಳುವುದಕ್ಕಿಂತ ಪಿ.ಕೆ.ಪಿ.ಎಸ್ ಹಾಗೂ ಡಿ.ಸಿ.ಸಿ ಬ್ಯಾಂಕುಗಳಲ್ಲಿ ಸಾಲ ಪಡೆದು ಕೊಳ್ಳುವ ಕೆಲಸ ಮಾಡಬೇಕೆಂದು ಹೇಳಿದರು.ತಾಲೂಕಿನ ಮಣ್ಣೂರಿನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರೈತರು ಶೂನ್ಯ ಬಡ್ಡಿದರದಲ್ಲಿ ಪಿ.ಕೆ.ಪಿ.ಎಸ್ ಹಾಗೂ ಡಿಸಿಸಿ ಬ್ಯಾಂಕಗಳಲ್ಲಿ ಸಾಲ ಪಡೆದು ಕೊಂಡು ವೈಜ್ಞಾನಿಕ ಕೃಷಿ ಮಾಡಿ ಕೊಂಡಾಗ ಆರ್ಥಿಕ ಸಬಲರಾಗಲು ಸಾಧ್ಯವಾಗುತ್ತದೆ ಎಂದರು. ವೈಜ್ಞಾನಿಕ ಕೃಷಿ ಜೊತೆಗೆ ಹೈನುಗಾರಿಕೆಯಂತಹ ಕೆಲಸಗಳನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ವಕೀಲ ಬಿ. ಕೆ ಕಲ್ಲೂರ ಮಾತನಾಡಿ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅದಕ್ಕೆ ನಾಗೋಡ ಗುಡ್ಡದ ಬಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು. ಇದೇ ಸಮಯದಲ್ಲಿ ವೇದಿಕೆ ಮೇಲೆ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈರಣ್ಣ ಪಟ್ಟಣಶೆಟ್ಟಿ ಸುರೇಶ ಹಾರಿವಾಳ, ನೀಲು ನಾಯಕ, ಕಲ್ಲು ಸೊನ್ನದ, ರಾಮನಗೌಡ ಪಾಟೀಲ, ಸಾಯಬಣ್ಣ ಗೊಳಸಂಗಿ, ರಾಘವೇಂದ್ರ ಲಮಾಣಿ ಯಲ್ಲಪ್ಪ ತಳವಾಡ , ಮಲ್ಲಿಕಾರ್ಜುನ್ ಜುಗತಿ ಬ್ಯಾoಕಿನ ಉಪಾಧ್ಯಕ್ಷ ಮಲ್ಲಪ್ಪ ಉಣ್ಣಿಭಾವಿ ಮತ್ತು ಅನೇಕ ಪೂಜ್ಯರು ಊರಿನ ಗುರು ಹಿರಿಯರು ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ