ಬೆನಹಾಳ ಗ್ರಾಮದ ಕನ್ನೂರ ಸಿದ್ಧಲಿಂಗೇಶ್ವರ ಮಠದಲ್ಲಿ ಸಾಮೂಹಿಕ ವಿವಾಹ – ಧರ್ಮಸಭೆ ಉದ್ದೇಶಿಸಿ ಶ್ರೀಗಳ ಆಶೀರ್ವಚನ.
ಹೊಳೆ ಆಲೂರು ಫೆ.09

ಜೀವನದಲ್ಲಿ ಧಾರ್ಮಿಕ ಚಿಂತನೆಗಳನ್ನು ಅಳವಡಿಸಿ ಕೊಳ್ಳಬೇಕು. ಗ್ರಾಮದಲ್ಲಿನ ಸಂಘ ಸಂಸ್ಥೆಗಳು ಪಕ್ಷಾತೀತವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಉತ್ತಮ ಕಾರ್ಯವಾಗಿದೆ. 14 ವರ್ಷಗಳ ನಿರಂತರವಾಗಿ ಸಾಮೂಹಿಕ ವಿವಾಹಗಳನ್ನು ಯಾವುದೇ ಪ್ರತಿ ಫಲ ಬಯಸದೆ ಮಾಡಿ ಕೊಂಡು ಬರುತ್ತಿರುವ ಹಿರಿಯರಾದ ಸೋಮಣ್ಣ ಉಮಚಗಿ ಹಾಗೂ ಕನ್ನೂರ ಸಿದ್ಧಲಿಂಗೇಶ್ವರ ಭಕ್ತ ಸಮೂಹಕ್ಕೆ ಆರೋಗ್ಯ ಕೊಟ್ಟು, ಧಾರ್ಮಿಕ ಕೆಲಸಕ್ಕೆ ಸದಾ ಮುಂದೆ ಇರಲಿ ಎಂದು ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.ಅವರು ಸಮೀಪದ ಬೆನಹಾಳ ಗ್ರಾಮದ ಶ್ರೀ ಕನ್ನೂರ ಸಿದ್ಧಲಿಂಗ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆಯ 14 ನೇ. ವಾರ್ಷಿಕೋತ್ಸವ ಅಂಗವಾವಾಗಿ ಹಮ್ಮಿಕೊಂಡ ಶನಿವಾರ ದಿವಸ ಸರ್ವ ಧರ್ಮ ಸಾಮೂಹಿಕ ವಿವಾಹ ಹಿನ್ನಲೆ ಹರಗುರು ಚರಮುರ್ತಿಗಳ ಆಶೀರ್ವಚನ ನಡುವೆ 10 ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ನಂತರ ಧರ್ಮ ಸಭೆಯಲ್ಲಿ ದಾನಿಗಳಿಗೆ, ಕಲಾವಿದರಿಗೆ, ಶ್ರೀಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದರು. ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು ಮಾತನಾಡಿ, ಭಾರತೀಯ ಧರ್ಮ ಪರಂಪರೆಯಲ್ಲಿ ವಿವಾಹಕ್ಕೆ ತನ್ನದೇಯಾದ ಮೌಲ್ಯವನ್ನು ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಯಿಂದ ವಿವಾಹವು ಅದರ ಮೌಲ್ಯ ಕಳೆದು ಕೊಳ್ಳುತ್ತಿದೆ. ನವ ದಂಪತಿಗಳು ಆದರ್ಶ ಗುಣಗಳನ್ನು ಅಳವಡಿಸಿ ಕೊಂಡು ಪರಸ್ಪರ ಹೊಂದಾಣಿಕೆ ಯಿಂದ ಜೀವನ ನಡೆಸಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ಸಾಮೂಹಿಕ ವಿವಾಹದಲ್ಲಿ ಮದುವೆ ಯಾಗುವುದರಿಂದ ಆರ್ಥಿಕ ಹೊರೆ ತಡೆಯಬಹುದು. ಆರ್ಥಿಕವಾಗಿ ಸಂಕಷ್ಟ ಎದುರುಸುತ್ತಿರುವ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗಲಕೋಟೆ ವಿದ್ಯಾಗಿರಿಮಠದ ಸ.ಸ ವಿಶ್ವರಾಜೇಂದ್ರ ಸ್ವಾಮಿಗಳು, ದಿವ್ಯ ಸಾನಿಧ್ಯವನ್ನು ಬೆನಹಾಳ ಹಿರೇಮಠದ ಷ.ಬ್ರ.ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಗವಿಮಠದ ಮ.ನೀ. ಪ್ರ ಬಸವಲಿಂಗ ಸ್ವಾಮಿಗಳು, ಮ.ನಿ.ಪ್ರ. ಒಪ್ಪತ್ತೇಶ್ವರ ಸ್ವಾಮಿಗಳು, ಜ್ಞಾನ ವೈರಾಗ್ಯ ಮಲ್ಲಿಕಾರ್ಜುನ ಗುರುಗಳು, ಬಸವರಾಜ ಗುರುಗಳು, ಯಚ್ಚರೇಶ್ವರ ಸ್ವಾಮಿಗಳು, ವೀರಯ್ಯ ಅಜ್ಜನವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಆರ್.ಎಪ್.ಒ ಶೇಖರಪ್ಪ ಕಂಬಳಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ದಶರಥ ಗಾಣಿಗೇರ, ಮಾಜಿ ಜಿ.ಪಂ ಸದಸ್ಯರು ಎಫ್.ಆರ್ ಪಾಟೀಲ, ನಿಂಗಪ್ಪ ಬದಾಮಿ, ಯಚ್ಚರಗೌಡ ಗೋವಿಂದಗೌಡ್ರ, ಮುತ್ತು ಪಾಟೀಲ, ಬಸವರಾಜ ಬ್ಯಾಳಿ, ಮಲ್ಲನಗೌಡ ತಿಮ್ಮನಗೌಡ್ರ, ಎಸ್.ಎಸ್.ಗಿರಿಯಪ್ಪಗೌಡ್ರ, ಲಲಿತಾ ಕೊರನ್ನವರ, ಕುಮಾರ ಸಜ್ಜನರ, ಮಂಜು ಬಡಿಗೇರ, ಮಲ್ಲಣ್ಣ ಉಮಚಗಿ, ಶರಣಪ್ಪ ಮ್ಯಾಗೇರಿ, ವಿರೂಪಾಕ್ಷಯ್ಯ ಹಿರೇಕಲ್ಲಪ್ಪನವರ, ಅಮರಪ್ಪಗೌಡ ಗೌಡರ, ಗಂಗಪ್ಪ ಮಂಡಸೊಪ್ಪಿ, ಶಂಕರಯ್ಯ ಕಲ್ಮಠ ಸೇರಿದಂತೆ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ. ಗದಗ