“ವಿಜಯಪತಾಕೆ” ವಿಡೀಯೋ – ಸಾಂಗ್ ಬಿಡುಗಡೆ.

ಸಿದ್ದನಕೊಳ್ಳ ಫೆ.10

ಶ್ರೀ ಷಣ್ಮುಖಪ್ಪ.ಆರ್ ಎಲ್ ಅವರ ಶ್ರೀ ಬೊಮ್ಮಸಾಗರ ದುರ್ಗಾದೇವಿ ಪ್ರೊಡಕ್ಷನ್ ಚಿತ್ರ ನಿರ್ಮಾಣ ಸಂಸ್ಥೆಯ ‘ವಿಜಯಪತಾಕೆ’ ಕನ್ನಡ ಚಲನ ಚಿತ್ರದ ‘ಹೊಂಗನಸಲಿ ಹೆಣೆದ ಅನುರಾಗದ ಗೂಡು’ ವಿಡೀಯೋ ಹಾಡನ್ನು ಕಲಾ ಪೋಷಕರ ಮಠ ಸುಕ್ಷೇತ್ರ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ, ಶಿವಕುಮಾರ ಸ್ವಾಮಿಗಳು ಶ್ರೀಮಠದ ಆವರಣದಲ್ಲಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಕೋರಿದರು. ಗಜೇಂದ್ರಗಡದ ಆರ್.ಶೈನ್ ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ‘ವಿಜಯಪಾತಕೆ’ ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರೇ ಹೆಚ್ಚು ಅಭಿನಯಿಸಿದ್ದು ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸ ಬೇಕೆಂದು ಶ್ರೀಗಳು ನುಡಿದರು. ನಿರ್ದೇಶಕ ಆರ್.ಶೈನ್ ಮಾತನಾಡಿ ಧಾರವಾಡ ಜಿಲ್ಲೆಯ ನಿಗದಿ, ಬೆಣಕನಕಟ್ಟೆ, ಮುರಕಟ್ಟಿ, ಹಳಿಯಾಳ, ದಾಂಡೇಲಿ, ಗದಗ ಜಿಲ್ಲೆಯ ಗಜೇಂದ್ರಗಡ, ಭೈರಾಪೂರ, ಕೊಪ್ಪಳ ಜಿಲ್ಲೆಯ ಹನುಮಸಾಗರ, ಚಂದಾಲಿಂಗೇಶ್ವರ ದೇವಸ್ಥಾನ, ಮತ್ತು ಇಲಕಲ್ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳ, ಕರಾವಳಿ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇದೀಗ ಉತ್ತರ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದರಾದ ಮಾಳು ನಿಪನಾಳ ಅವರ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ಜಾಲತಾಣದಲ್ಲಿ ಚಿತ್ರದ ಈ ಹಾಡು ಬಿಡುಗಡೆ ಆಗಿದೆ. ಹಾಡನ್ನು ನೋಡಿ ಮತ್ತು ಸಧ್ಯದಲ್ಲೇ ಚಿತ್ರ ಬಿಡುಗಡೆ ಯಾಗಲಿದ್ದು ತಾವೆಲ್ಲ ಚಿತ್ರವನ್ನು ನೋಡಿ ಚಿತ್ರ ತಂಡಕ್ಕೆ ಬೆಂಬಲಿಸ ಬೇಕು ಎಂದರು. ಚಿತ್ರದಲ್ಲಿ ನಾಯಕಿಯಾಗಿ ವಾಣಿ ಬಿಜಾಪೂರ, ಮುಖ್ಯ ಖಳನಾಯಕರಾಗಿ ಶೋಭರಾಜ್, ಹರೀಶ್ ಪತ್ತಾರ, ಆನಂದ.ಕೆ, ಸಂಗನಗೌಡ ಕುರುಡಗಿ, ರಾಜಕುಮಾರ ಪಾಟೀಲ್, ಪಾಲಾಕ್ಷ, ಹುಸೇನ್ ಪತ್ತೇಖಾನ್, ನೇತ್ರಾ, ಅನ್ನಪೂರ್ಣ, ಪ್ರಕೃತಿ, ರಮಜಾನಸಾಬ್ ಉಳ್ಳಾಗಡ್ಡಿ, ಮುಂತಾದವರು ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಹಾಗೂ ನಿರ್ದೇಶನ ಆರ್.ಶೈನ್, ಸಂಗೀತ ರಾಘವ್ ಸುಭಾಸ್, ಸಾಹಿತ್ಯ ಸುಭಾಸ್ ಬೆಟಗೇರಿ, ಹಿನ್ನೆಲೆ ಗಾಯನ ಅಭೀಷೇಕ ಎಮ್ ಆರ್, ಮೇಘನಾ ಹಳಿಯಾಳ ಹಾಗೂ ಸಾತ್ವಿಕ. ಛಾಯಾಗ್ರಹಣ ಗಿರೀಶ್ ಶಿರಗೇನಹಳ್ಳಿ, ಭರತ್, ಶ್ಯಾಮ್, ಸಂಕಲನ ರವಿ ರಾಠೋಡ, ಸಾಹಸ ಸಂತೋಷ ರಾಠೋಡ, ನೃತ್ಯ ಕಂಬಿ ರಾಜು, ವರ್ಣಾಲಂಕಾರ ಶ್ರೀಕಾಂತ್ ಕುಲಕರ್ಣಿ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಕ್ರಿಯೇಟಿವ್ ಹೆಡ್ ಸಿ.ಜಿ ವೆಂಕಟೇಶರಾವ್ ಅವರಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಆರ್.ಶೈನ್, ಚಲನ ಚಿತ್ರದ ಪಿ.ಆರ್.ಓ ಡಾ, ಪ್ರಭು ಗಂಜಿಹಾಳ, ಚಿತ್ರನಟ ಸಂಗನಗೌಡ ಕುರುಡಗಿ, ಪ್ರೊ. ಮಲ್ಲಿಕಾರ್ಜುನ ಬೇವೂರ ಸೇರಿದಂತೆ ಚಿತ್ರ ತಂಡದ ಕಲಾವಿದರು, ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

*****

ವರದಿ:ಡಾ.ಪ್ರಭು ಗಂಜಿಹಾಳ

ಮೊ: ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button