ಗ್ರಾಮ ಲೆಕ್ಕಧಿಕಾರಿ ಹುದ್ದೆಯನ್ನು ತಾಂತ್ರಿಕ ಹುದ್ದೆಯ – ಶ್ರೇಣಿ ನೀಡುವಂತೆ ಆಗ್ರಹ.
ಮಾನ್ವಿ ಫೆ.10

ಸರಕಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೌಲಭ್ಯ ನೀಡದ ಕಾರಣ ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾನ್ವಿ ಪಟ್ಟಣದ ಶಾಸಕರ ಭವನದ ಮುಂದೆ ಗ್ರಾಮ ಲೆಕ್ಕಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಕೊಂಡು ಪ್ರತಿಭಟನೆ ನಡೆಸಿದರು.
ನಾವು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸ ಬೇಕಾದರೆ ನಿರ್ದಿಷ್ಟವಾದ ಕಚೇರಿ ಇಲ್ಲದ ಕಾರಣ ಎಲ್ಲೋ ಇರುವ ಕಟ್ಟೆಯ ಮೇಲೆ ಹಾಗೂ ಶಾಲೆಯ ಆವರಣದ ಮುಂದೆ ಕುಳಿತು ಜನರಿಗೆ ಸೌಲಭ್ಯ ನೀಡಬೇಕಾಗಿದೆ. ನಮಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಕ್ಕರೆ ನಾವೇ ಕೇಂದ್ರ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ