ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ – ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ.
ಕೊಟ್ಟೂರು ಫೆ .10





ಈ ಹಿಂದೆ 23-ಸೆಪ್ಟಂಬರ್ 2024 ರ ತಿಂಗಳಲ್ಲಿ 15 ದಿನಗಳ ಕಾಲ ಮುಷ್ಕರವನ್ನು ಕೈಗೊಂಡಿದ್ದು, ಬೇಡಿಕೆ ಈಡೇರಿಸಲು ಒಪ್ಪಿದ ಕಾರಣ ಹಿಂತೆಗೆದು ಕೊಳ್ಳಲಾಗಿತ್ತು. ಆದರೆ ಬೇಡಿಕೆಗಳು ಇದುವರೆಗೂ ಈಡೇರದೇ ಇರುವ ಕಾರಣ 2 ನೇ. ಹಂತರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿ ಸೋಮವಾರ ರಂದು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಬೇಡಿಕೆಗಳು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯವಾಗಿ ಕಾರ್ಯ ನಿರ್ವಹಿಸಲು ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸುವುದು, ಇ-ಪೌತಿ ಆಂದೋಲನದ ಆಪ್ ಕೈಬಿಡುವುದು, ಅಂತರ್ ಜಿಲ್ಲಾ ವರ್ಗಾವಣೆಯನ್ನು ಮರು ಸ್ಥಾಪಿಸುವುದು, ಜೇಷ್ಠತಾ ಪಟ್ಟಿಯನ್ನು ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನಾಗಿ ಪರಿವರ್ತಿಸುವುದು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿದಿರುವುದನ್ನು ಹಿಂಪಡೆಯುವುದು, ಗ್ರಾಮ ಲೆಕ್ಕಿಗರು ತಾಂತ್ರಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿರುವು ದರಿಂದ ತಾಂತ್ರಿಕ ಹುದ್ದೆಗೆ ನೀಡುವ ಸಮಾನ ವೇತನವನ್ನು ನಿಗಧಿ ಪಡಿಸುವುದು.

ಬೆಳೆ ಸಮೀಕ್ಷೆ ಹಾಗೂ ಬೆಳೆ ಪರಿಹಾರವು ಕೃಷಿ ಇಲಾಖೆಗೆ ಸಂಬಂಧಿಸಿರುವುದ ರಿಂದ ಅವರಿಗೆ ವಹಿಸುವುದು. ಪ್ರಯಾಣ ಭತ್ಯೆ ದರ ವನ್ನು ಹಾಲೀ ಇರುವ ರೂ.500/- ಗಳಿಂದ ರೂ. 5000/-ಗಳಿಗೆ ಹೆಚ್ಚಿಸುವುದು, ದಫ್ತರ್ ಹಾಗೂ ಜಮಾ ಬಂದಿಯನ್ನು ರದ್ದು ಗೊಳಿಸುವುದು, ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಾಬ್ಚಾರ್ಟ್ ನಿಗಧಿ ಪಡಿಸುವುದು, ಮುಟೇಷನ್ ಅವಧಿಯನ್ನು 7 ದಿನಗಳ ಬದಲಾಗಿ 15 ದಿನಗಳಿಗೆ ಹೆಚ್ಚಿಸುವುದು, ರ್ಯಾಂಕಿಂಗ್ ಪದ್ದತಿಯನ್ನು ಕೈಬಿಡುವುದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಕೊಟ್ಟೂರು ತಾಲೂಕಿನ ಅಧ್ಯಕ್ಷರಾದ ಜ್ಯೋತಿಬಾಯಿ ಇವರು ತಹಶೀಲ್ದಾರರಾದ ಅಮರೇಶ್.ಜಿ ಕೆ ಇವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಮಯದಲ್ಲಿ ಗ್ರಾಮ ಆಡಳಿತ ಸಂಘದ ಪದಾಧಿಕಾರಿಗಳು, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ.ಎಸ್ ಎಂ ಹಾಗೂ ಡಿ.ಶಿವಕುಮಾರ್, ಸ ನೌ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಎಸ್.ಎಂ ಗುರು ಬಸವರಾಜ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು